HomeEntertainmentʼಪಠಾಣ್ʼ​ ಹಾಡಿಗೆ ಇಂಡೋನೇಷಿಯಾದಲ್ಲೂ ಹುಚ್ಚೆದ್ದು ಕುಣಿದ ಅಭಿಮಾನಿಗಳು: ವಿಡಿಯೋ ವೈರಲ್​

ʼಪಠಾಣ್ʼ​ ಹಾಡಿಗೆ ಇಂಡೋನೇಷಿಯಾದಲ್ಲೂ ಹುಚ್ಚೆದ್ದು ಕುಣಿದ ಅಭಿಮಾನಿಗಳು: ವಿಡಿಯೋ ವೈರಲ್​

ಇಂಡೋನೇಷಿಯಾ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಧಿಕೃತ ಅಭಿಮಾನಿ ಪುಟ ಎಂದು ಹೇಳಿಕೊಳ್ಳುವ ಇಂಡೋನೇಷ್ಯಾದ ಫೇಸ್​ಬುಕ್​ ಪೇಜ್​ ಒಂದು ಪಠಾಣ್ ಕ್ರೇಜ್‌ನಲ್ಲಿರುವ ಇಂಡೋನೇಷಿಯಾದ ಅಭಿಮಾನಿಗಳ ವಿಡಿಯೋ ಶೇರ್​ ಮಾಡಿಕೊಂಡಿದೆ.

ದೇಶದ ಬಂಡಂಗ್ ಪ್ರದೇಶದಲ್ಲಿ ದೊಡ್ಡ ಪರದೆಯ ಮೇಲೆ ಚಲನಚಿತ್ರವನ್ನು ಪ್ರದರ್ಶಿಸಲಾಗಿದ್ದು, ಜನರು ‘ಜೂಮೇ ಜೋ ಪಠಾಣ್​’ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿರುವುದನ್ನು ನೋಡಬಹುದಾಗಿದೆ. ಇಂಡೋನೇಷಿಯಾದ ಶಾರುಖ್​ ಅಭಿಮಾನಿಗಳು ಚಲನಚಿತ್ರವನ್ನು ಆನಂದಿಸುವುದನ್ನು ನೋಡಬಹುದಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದೇಶಗಳಲ್ಲಿಯೂ ಬಾಲಿವುಡ್ ತಾರೆಯರನ್ನು ಜನರು ಪ್ರೀತಿಸುವುದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ವೈರಲ್ ವೀಡಿಯೊದಲ್ಲಿ ನಾವು ನೋಡುವಂತೆ ಶಾರುಖ್​ ಅಭಿಮಾನಿಗಳು ದೊಡ್ಡ ಪರದೆಯ ಪಕ್ಕದಲ್ಲಿ ಟ್ರೆಂಡಿಂಗ್ ಹಾಡಿನ ನೃತ್ಯದ ಚಲನೆಯನ್ನು ಮರುಸೃಷ್ಟಿಸುವುದನ್ನು ಕಾಣಬಹುದು.

For Latest News Updates, Join Our Whatsapp Community🚩
RELATED ARTICLES

Most Popular