HomeEntertainmentನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿ ನಂದಮೂರಿ ತಾರಕರತ್ನ ಆರೋಗ್ಯ ವಿಚಾರಿಸಿದ ಶಿವಣ್ಣ, ಬಾಲಯ್ಯ, ಜೂ. NTR

ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿ ನಂದಮೂರಿ ತಾರಕರತ್ನ ಆರೋಗ್ಯ ವಿಚಾರಿಸಿದ ಶಿವಣ್ಣ, ಬಾಲಯ್ಯ, ಜೂ. NTR

ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿರುವ ನಟ ನಂದಮೂರಿ ತಾರಕರತ್ನ ಅವರಿಗೆ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಮುಂದುವರೆದಿದೆ.

ನಟರಾದ ಶಿವರಾಜ್ ಕುಮಾರ್, ನಂದಮೂರಿ ಬಾಲಕೃಷ್ಣ, ಜೂನಿಯರ್ ಎನ್.ಟಿ.ಆರ್., ನಂದಮೂರಿ ಕಲ್ಯಾಣ್ ರಾಮ್, ಸಚಿವ ಡಾ.ಕೆ. ಸುಧಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನಿಯರ್ ಎನ್ಟಿಆರ್ ಇಂದು ಸಹೋದರ ಕಲ್ಯಾಣ್ ರಾಮ್ ಮತ್ತು ಸಚಿವ ಸುಧಾಕರ ಅವರೊಂದಿಗೆ ನಾರಾಯಣ ಹೃದಯಾಲಯಕ್ಕೆ ಆಗಮಿಸಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಜೂ.ಎನ್.ಟಿ.ಆರ್., ತಾರಕರತ್ನ ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೇವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಅಭಿಮಾನಿಗಳ ಆಶೀರ್ವಾದ ಇದೆ. ನಮ್ಮ ತಾತ ನಂದಮೂರಿ ರಾಮರಾವ್ ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಾರೆ. ಎಲ್ಲರ ಆಶೀರ್ವಾದದಿಂದ ತಾರಕರತ್ನ ಗುಣಮುಖರಾಗುತ್ತಾರೆ. ಆರೋಗ್ಯ ಸಚಿವ ಸುಧಾಕರ್ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular