HomeInternationalಬಸ್ ಕಂದಕಕ್ಕೆ ಬಿದ್ದು ಘೋರ ದುರಂತ: 24 ಪ್ರಯಾಣಿಕರು ಸಾವು

ಬಸ್ ಕಂದಕಕ್ಕೆ ಬಿದ್ದು ಘೋರ ದುರಂತ: 24 ಪ್ರಯಾಣಿಕರು ಸಾವು

ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದು ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪೆರುವಿನಲ್ಲಿ 60 ಪ್ರಯಾಣಿಕರಿದ್ದ ಬಸ್ ರಸ್ತೆಯಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಉರುಳಿದ ನಂತರ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆರುವಿನ ಸಾರಿಗೆ ಮೇಲ್ವಿಚಾರಣಾ ಸಂಸ್ಥೆ(SUTRAN) ಹೇಳಿಕೆಯಲ್ಲಿ ಅಪಘಾತವನ್ನು ದೃಢಪಡಿಸಿದೆ. Q’Orianka Tours Aguila Dorada ಎಂಬ ಕಂಪನಿಯ ಬಸ್‌ ಪೆರುವಿನ ಉತ್ತರ ಭಾಗದಲ್ಲಿರುವ ಎಲ್ ಆಲ್ಟೋ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೆರುವಿನಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ, ಅನೇಕ ಚಾಲಕರು ಅನಿಶ್ಚಿತ ರಸ್ತೆಗಳಲ್ಲಿ ಮತ್ತು ಸರಿಯಾದ ತರಬೇತಿಯಿಲ್ಲದೆ ವಾಹನಗಳನ್ನು ನಿರ್ವಹಿಸುತ್ತಾರೆ. 2021 ರಲ್ಲಿ ಆಂಡಿಸ್ ಪರ್ವತಗಳ ಹೆದ್ದಾರಿಯಿಂದ ಬಸ್ ಉರುಳಿ 29 ಜನರು ಸಾವನ್ನಪ್ಪಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular