ಸ್ಯಾಮ್ಸಂಗ್ ಟಿ 7 ಹೊಸ ಎಸ್ಎಸ್ ಡಿ ಯನ್ನು ಮಾರುಕಟ್ಟೆಗೆ ಪರಿಚಯಸಿದ್ದು, ಇದೀಗ ತನ್ನ ವಿಶಿಷ್ಟ ಬಗೆಯಿಂದಾಗಿ ಸುದ್ದಿಯಾಗಿದೆ. ಡೇಟಾ ಸಂಗ್ರಹಣೆಗೆ ವಿಶಾಲವಾದ ಸ್ಥಳಾವಕಾಶ ಇರುವ ಈ ಎಸ್ಎಸ್ ಡಿ ಈಗ ಸುದ್ದಿಯಲ್ಲಿ ಇರಲು ಕಾರಣವೇನೆಂದರೆ ಅದು ಕಾಣಿಸುವ ವಿಶಿಷ್ಟ ಬಗೆಯಿಂದಾಗಿದೆ.
ಈ ಕುರಿತು ಸ್ಯಾಮ್ಸಂಗ್ ಇಂಡಿಯಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಎಸ್ಎಸ್ ಡಿ ಯನ್ನು ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಈ ಎಸ್.ಎಸ್.ಡಿ.ಯು ರಿನ್ ಸೋಪಿನ ರೀತಿಯಲ್ಲಿ ಕಾಣಿಸುತ್ತದೆ.
ಒಮ್ಮೆಲೆ ನೋಡಿದರೆ ರಿನ್ ಸೋಪಿನಂತೆ ಕಾಣಿಸಿರುವ ಈ ಎಸ್.ಎಸ್.ಡಿ.ಯನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದು ಸ್ಯಾಮ್ಸಂಗ್ ಎಸ್ಎಸ್ಡಿಯೋ ಅಥವಾ ರಿನ್ ಸೋಪಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸ್ಯಾಮ್ಸಂಗ್ನ ಈ ಉತ್ಪನ್ನವು ಕಡು ನೀಲಿ ಬಣ್ಣದ್ದಾಗಿದೆ, ನೋಡಲು ಥೇಟ್ ರಿನ್ ಸೋಪಿನ ರೀತಿಯಲ್ಲಿ ಕಾಣಿಸುತ್ತದೆ. ಕೆಲವರು ಇದನ್ನು ರಿನ್ ಸೋಪ್ ಎಂದಿದ್ದರೆ, ಕೆಲವರು ಸರ್ಫ್ ಎಕ್ಸೆಲ್ ಎಂದಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ತಮಾಷೆಯ ಕಮೆಂಟ್ಸ್ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ನೆಟ್ಟಿಗರನ್ನು ವಿವಿಧ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ.