ಸ್ಕೂಬಾ ಡೈವಿಂಗ್ ಹೆಚ್ಚಿನ ಸಂದರ್ಭಗಳಲ್ಲಿ ಅಪಾಯಕಾರಿಯೇ ಆಗಿರುತ್ತದೆ. ಎಷ್ಟೋ ವೇಳೆ ನೀರ ಒಳಗಿರುವ ಅಪಾಯಕಾರಿ ಜಲಚರಗಳಿಗೆ ಮುಖಾಮುಖಿಯಾಗುವ ಸಂದರ್ಭಗಳು ಬಂದೊದಗಬಹುದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಸ್ಕೂಬಾ ಡೈವಿಂಗ್ ಮಾಡುತ್ತಿರುವ ವ್ಯಕ್ತಿಗೆ ಶಾರ್ಕ್ ಒಂದು ಮುಖಾಮುಖಿಯಾಗಿರುವ ಭಯಾನಕ ವಿಡಿಯೋ ಇದಾಗಿದೆ. ಡೈವಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿಯ ತಲೆಯ ಮೇಲೆ ಶಾರ್ಕ್ ಹೊಡೆದಿರುವುದನ್ನು ನೋಡಬಹುದು. ಇದೊಂದು ಭಯಾನಕ ಎನ್ಕೌಂಟರ್ ಎನ್ನಲಾಗಿದೆ.
ಸ್ಕೂಬಾ ಡೈವರ್ ತನ್ನ ತಲೆಯ ಮೇಲೆ ಕಚ್ಚಲು ಬಂದ ದೊಡ್ಡ ಬಿಳಿ ಶಾರ್ಕ್ ದಾಳಿಯಿಂದ ಸಾವಿನಿಂದ ಪಾರಾಗಲು ಅದೃಷ್ಟಶಾಲಿಯಾಗಿದ್ದಾನೆ. ನೀರಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿಲ್ಲವಾದ್ದರಿಂದ ಶಾರ್ಕ್ ಬಂದಿರುವುದು ಆತನಿಗೆ ತಿಳಿಯಲಿಲ್ಲ. ಈ ವಿಡಿಯೋ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 2017ರಲ್ಲಿ ನಡೆದಿರುವ ಘಟನೆ ಇದು ಎನ್ನಲಾಗಿದ್ದು, ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
https://twitter.com/OTerrifying/status/1618467169830064129?ref_src=twsrc%5Etfw%7Ctwcamp%5Etweetembed%7Ctwte