HomeLatest News50 ಕೋಟಿ ಮನೆ, 2 ಕೋಟಿ ಮೌಲ್ಯದ ಕಾರ್, 80 ಲಕ್ಷದ ಬೈಕ್, 30 ಲಕ್ಷದ...

50 ಕೋಟಿ ಮನೆ, 2 ಕೋಟಿ ಮೌಲ್ಯದ ಕಾರ್, 80 ಲಕ್ಷದ ಬೈಕ್, 30 ಲಕ್ಷದ ವಾಚ್: ಕೆಎಲ್ ರಾಹುಲ್ –ಆಥಿಯಾ ಶೆಟ್ಟಿಗೆ ದುಬಾರಿ ಗಿಫ್ಟ್

ಮುಂಬೈ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ –ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಅವರಿಗೆ ದುಬಾರಿ ಗಿಫ್ಟ್ ಬಂದಿವೆ.

ವಿರಾಟ್ ಕೊಹ್ಲಿ 2.17 ಕೋಟಿ ರೂ ಮೌಲ್ಯದ ಬಿಎಂಡಬ್ಲ್ಯೂ ಕಾರ್, ಎಂಎಸ್ ಧೋನಿ 80 ಲಕ್ಷ ರೂಪಾಯಿ ಮೌಲ್ಯದ ಕವಾಸಕಿ ನಿಂಜಾ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಥಿಯಾ ಶೆಟ್ಟಿಗೆ ನಟ ಸಲ್ಮಾನ್ ಖಾನ್ 1.64 ಕೋಟಿ ರೂ. ಮೌಲ್ಯದ ಆಡಿ ಕಾರ್, ಜಾಕಿಶ್ರಾಫ್ 30 ಲಕ್ಷ ರೂಪಾಯಿ ಮೌಲ್ಯದ ವಾಚ್, ಅರ್ಜುನ್ ಕಪೂರ್ 1.5 ಕೋಟಿ ರೂ ಮೌಲ್ಯದ ವಜ್ರ ಖಚಿತ ಬ್ರೇಸ್ ಲೈಟ್ ನೀಡಿದ್ದಾರೆ.

ಸುನಿಲ್ ಶೆಟ್ಟಿ ಮುಂಬೈನಲ್ಲಿ 50 ಕೋಟಿ ರೂ ಮೌಲ್ಯದ ಐಶಾರಾಮಿ ಅಪಾರ್ಟ್ಮೆಂಟ್ ಅನ್ನು ಮಗಳು, ಅಳಿಯನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸಹ ಆಟಗಾರರು ಮತ್ತು ಪ್ರಮುಖರಿಂದ ದುಬಾರಿ ಉಡುಗೊರೆಗಳು ಬಂದಿವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular