ಜೀವನಶೈಲಿಯ ಬದಲಾವಣೆಯ ಜೊತೆಗೆ ಒತ್ತಡ, ಮದ್ಯಪಾನ ಮತ್ತು ಧೂಮಪಾನ ಯುವಜನರಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣ. ಯುವ ಸಮೂಹವು ನಿರಂತರ ಒತ್ತಡದಲ್ಲಿದೆ, ಇದರಿಂದಾಗಿ ಹೆಚ್ಚಿನ ಮತ್ತು ಕಡಿಮೆ ಮಟ್ಟದ ಕಾರ್ಟಿಸೋಲ್ ಹಾರ್ಮೋನ್ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಹಾಗಾಗಿ ಯಾರಿಗಾದರೂ ಹೃದಯಾಘಾತವಾಗಬಹುದು. ಆದರೆ ಈ ಬಾರಿ ಲೋ ಬಿಪಿ ಪ್ರಕರಣಗಳೂ ಕಂಡುಬಂದಿವೆ. ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ ಎನ್ನುತ್ತಾರೆ ವೈದ್ಯರು.