HomeKarnatakaBIG NEWS: ಪೊಲೀಸರಿಗೆ ತಲೆನೋವಾದ ಪಾಕ್ ಮಹಿಳೆ ಬಂಧನ ಪ್ರಕರಣ

BIG NEWS: ಪೊಲೀಸರಿಗೆ ತಲೆನೋವಾದ ಪಾಕ್ ಮಹಿಳೆ ಬಂಧನ ಪ್ರಕರಣ

‌ಬೆಂಗಳೂರು: ಬೆಂಗಳೂರಿನಲ್ಲಿ ಪಾಕ್ ಮಹಿಳೆ ಬಂಧನ ಪ್ರಕರಣ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ತಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದಿದ್ದಾಳೆ ಎನ್ನಲಾಗಿದೆ.

ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನದ 19 ವರ್ಷದ ಇಕ್ರಾ ಜೀವನಿ ಎಂಬ ಮಹಿಳೆಯನ್ನು ಎರಡು ದಿನಗಳ ಹಿಂದೆ ಬೆಳ್ಳಂದೂರು ಪೊಲೀಸರು ಬಂಧಿಸಿದ್ದರು. ಇಕ್ರಾ ಜೀವಿನಿ ನೇಪಾಳದ ಮೂಲಕ ಭಾರತದ ಗಡಿ ದಾಟಿ ಬಂದಿದ್ದಳು. ಡೇಟಿಂಗ್ ಆಪ್ ಮೂಲಕ ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತನನ್ನು ಪರಿಚಯವಾಗಿ ಮದುವೆಯಾಗಿದ್ದಳು. ಮುಲಾಯಂ ಸಿಂಗ್ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಅಗಿ ಕೆಲಸ ಮಾಡುತ್ತಿದ್ದು, ಆತನೊಂದಿಗೆ ಇಕ್ರಾ ಜೀವನಿ ವಾಸವಾಗಿದ್ದಳು.

ಇದೀಗ ಮಹಿಳೆ ಇಕ್ರಾ ಜೀವನಿ, ತಾನು ಪತಿ ಮುಲಾಯಂ ಸಿಂಗ್ ಬಿಟ್ಟು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನಾವಿಬ್ಬರೂ ಮದುವೆಯಾಗಿದ್ದೇವೆ ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಅಧಿಕಾರಿಗಳ ಬಳಿ ಪಟ್ಟು ಹಿಡಿದಿದ್ದಾಳೆ. ಸಧ್ಯ ಇಕ್ರಾ ಜೀವನಿ ಎಫ್ ಆರ್ ಆರ್ ಓ ಅಧಿನದಲ್ಲಿದ್ದಾಳೆ. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೆಂಗಳೂರಿನಲ್ಲಿ ವಾಸವಾಗಿದ್ದ ಇಕ್ರಾಳನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ ಇಕ್ರಾ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular