HomeIndiaಬಡವರಿಗಾಗಿ ಮಾಲ್​ನಲ್ಲಿ ಉಚಿತವಾಗಿ ಚಳಿಗಾಲದ ಬಟ್ಟೆ ಪೂರೈಕೆ

ಬಡವರಿಗಾಗಿ ಮಾಲ್​ನಲ್ಲಿ ಉಚಿತವಾಗಿ ಚಳಿಗಾಲದ ಬಟ್ಟೆ ಪೂರೈಕೆ

ಲಖನೌ: ಇಲ್ಲಿನ ‘ಅನೋಖಾ ಮಾಲ್‌’ನಲ್ಲಿ ಬಡವರು ಬಂದು ತಮ್ಮ ಆಯ್ಕೆಯ ಬೆಚ್ಚನೆಯ ಬಟ್ಟೆ ಅಥವಾ ಇತರ ಪರಿಕರಗಳನ್ನು ಯಾವುದೇ ಹಣ ನೀಡದೆ ತೆಗೆದುಕೊಂಡು ಹೋಗಬಹುದಾಗಿದೆ. ನಂಬಲು ಅಸಾಧ್ಯವೆನಿಸುವ ಈ ಕಾರ್ಯ ಕೆಲ ವರ್ಷಗಳಿಂದ ನಡೆಯುತ್ತಲಿದೆ.

ಹಿತೈಷಿಗಳು, ದಾನಿಗಳು ನೀಡುವ ಬಟ್ಟೆಗಳನ್ನು ಬಡ ರಿಕ್ಷಾ ಚಾಲಕರು, ಕಾರ್ಮಿಕರು, ಕೊಳೆಗೇರಿ ನಿವಾಸಿಗಳು ಮತ್ತು ಸಮಾಜದ ಇತರ ವಂಚಿತ ವರ್ಗಗಳ ಜನರಿಗೆ ನೀಡಲಾಗುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ಈ ಬೆಚ್ಚನೆಯ ಉಡುಪು ಉಚಿತವಾಗಿ ನೀಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಲ್ ಮೂರು ತಿಂಗಳ ಕಾಲ ಕಾರ್ಯನಿರ್ವಹಿಸುತ್ತದೆ, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ. ಇಲ್ಲಿನ ರಹೀಮ್ ನಗರದಲ್ಲಿ, ದಾನಿಗಳಿಂದ ಉಣ್ಣೆಯನ್ನು ತೆಗೆದುಕೊಂಡು ಬಡವರಿಗೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಕಳೆದ ಐದು ವರ್ಷಗಳಿಂದ ಇದು ನಡೆಯುತ್ತಿದ್ದು, ಇದೀಗ ಬೆಳಕಿಗೆ ಬಂದಿದೆ. ಈ ಮಾಲ್ ನಿರ್ವಹಿಸುತ್ತಿರುವ ಡಾ ಅಹ್ಮದ್ ರಜಾ ಖಾನ್ ಈ ವಿಷಯ ತಿಳಿಸಿದ್ದಾರೆ.

“ಉಣ್ಣೆಯ ಬಟ್ಟೆಗಳನ್ನು ಅಗತ್ಯವಿರುವವರಿಗೆ ವಿತರಿಸಿದಾಗ ಇತರ ಸ್ಥಳಗಳು ಮತ್ತು ಸಂದರ್ಭಗಳಲ್ಲಿ ಅವುಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ. ಆದರೆ ಅನೋಖಾ ಮಾಲ್‌ನಲ್ಲಿ, ಶಾಪಿಂಗ್​ ರೀತಿಯಲ್ಲಿ ಇದನ್ನು ಆಯೋಜನೆ ಮಾಡಲಾಗುತ್ತದೆ. ಎಲ್ಲರೂ ತಮ್ಮಿಷ್ಟದ ಬಟ್ಟೆಗಳನ್ನು ತೆಗೆದುಕೊಂಡು ಹೋಗಬಹುದು ಎನ್ನುತ್ತಾರೆ ಖಾನ್​.

For Latest News Updates, Join Our Whatsapp Community🚩
RELATED ARTICLES

Most Popular