HomeKarnatakaಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಡಾ. ಮಂಜಪ್ಪ ಇನ್ನಿಲ್ಲ

ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಡಾ. ಮಂಜಪ್ಪ ಇನ್ನಿಲ್ಲ

ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶಿವಮೊಗ್ಗ ಜಿಲ್ಲೆ ಸಾಗರದ ಡಾ. ಮಂಜಪ್ಪ ವಿಧಿವಶರಾಗಿದ್ದಾರೆ. 90 ವರ್ಷದ ಮಂಜಪ್ಪ ಅವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಾಗರದ ಜೆಸಿ ರಸ್ತೆಯಲ್ಲಿ ಕ್ಲಿನಿಕ್ ತೆರೆದು ಕಳೆದ ಆರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ. ಮಂಜಪ್ಪ ಬಡವರ ವೈದ್ಯರು ಎಂದೇ ಹೆಸರಾಗಿದ್ದರು. ಅಲ್ಲದೆ ರೋಗಿಗಳಿಗೆ ಇಂತಿಷ್ಟೇ ಶುಲ್ಕ ನೀಡಬೇಕು ಎಂದು ಎಂದಿಗೂ ಕೇಳುತ್ತಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಜಪ್ಪ ಅವರ ಅಂತ್ಯಕ್ರಿಯೆ ಭಾನುವಾರದಂದು ಮಾರಿಕಾಂಬ ರುದ್ರಭೂಮಿಯಲ್ಲಿ ನಡೆದಿದ್ದು, ಅದಕ್ಕೂ ಮುನ್ನ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಹರತಾಳು ಹಾಲಪ್ಪ ಮೊದಲಾದವರು ಮೃತರ ಅಂತಿಮ ದರ್ಶನ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular