ಪ್ರತಿ ದಿನ 5 ನಿಮಿಷದ ಈ ಟ್ರಿಕ್ಸ್ ಮಾಡಿದ್ರೆ ಕಡಿಮೆಯಾಗುತ್ತೆ ʼತೂಕʼ

The 5-Minute Japanese Towel Exercise For Abs: Does it Really Work? – DMooseತೂಕ ಕಡಿಮೆ ಮಾಡಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಜಿಮ್, ವ್ಯಾಯಾಮ, ವಾಕಿಂಗ್, ಮಾರುಕಟ್ಟೆಯಲ್ಲಿ ಸಿಗುವ ಔಷಧಿ, ಡಯೆಟ್ ಹೀಗೆ ಏನೆಲ್ಲ ಮಾಡಿದ್ರೂ ಕೊಬ್ಬು ಮಾತ್ರ ಕಡಿಮೆಯಾಗೋದಿಲ್ಲ. ಏನಪ್ಪಾ ಮಾಡೋದು ಅಂತಾ ಚಿಂತೆಯಲ್ಲಿರುವವರು ಈ ಜಪಾನಿ ಟ್ರಿಕ್ಸ್ ಬಳಸಿ. ಈ ವ್ಯಾಯಾಮ ಮಾಡಿದ್ರೆ ಕೆಲ ದಿನಗಳಲ್ಲಿ ನಿಮ್ಮ ತೂಕ ಕಡಿಮೆಯಾಗಲಿದೆ.

ಈ ವ್ಯಾಯಾಮ ಕೇವಲ ಕೊಬ್ಬನ್ನು ಮಾತ್ರ ಕಡಿಮೆ ಮಾಡೋದಿಲ್ಲ. ಬೆನ್ನು ನೋವಿಗೂ ಇದು ರಾಮಬಾಣ. ಇದಕ್ಕಾಗಿ ನೀವು ವಿಶೇಷವಾಗಿ ಏನೂ ಮಾಡಬೇಕಾಗಿಲ್ಲ. ದುಬಾರಿ ಬೆಲೆಯ ಜಿಮ್ ಮಷಿನ್ ಖರೀದಿ ಮಾಡುವ ಅವಶ್ಯಕತೆ ಇಲ್ಲ. ಈ ವ್ಯಾಯಾಮಕ್ಕೆ ಕೇವಲ ಟವೆಲ್ ರೋಲ್ ಇದ್ದರೆ ಸಾಕು.

ಯಸ್, ನಿಮ್ಮ ವ್ಯಾಯಾಮಕ್ಕೆ ಟವೆಲ್ ರೋಲ್ ಬೇಕು. ಈ ಟವೆಲ್ ರೋಲ್ ಬಳಸಿ ಮಾಡುವ ವ್ಯಾಯಾಮದಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವೈದ್ಯರೂ ಒಪ್ಪಿಕೊಂಡಿದ್ದಾರೆ. ಈ ಟವೆಲ್ ರೋಲ್ ಸೊಂಟದ ಬಳಿ ಇರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಈ ವ್ಯಾಯಾಮ ಮಾಡುವ ಮೊದಲು 15 ಇಂಚು ಉದ್ದ ಹಾಗೂ 4 ಇಂಚು ಅಗಲದ ಟವೆಲ್ ತೆಗೆದುಕೊಳ್ಳಿ. ಅದನ್ನು ಸರಿಯಾಗಿ ರೋಲ್ ಮಾಡಿ. ಮಧ್ಯೆ ಗಂಟು ಹಾಕಿ ಸುರಳಿ ಬಿಚ್ಚದಂತೆ ನೋಡಿಕೊಳ್ಳಿ. ಈ ಟವೆಲ್ ರೋಲನ್ನು ಸೊಂಟದ ಕೆಳಗಿಟ್ಟು, ಕಾಲುಗಳನ್ನು ನೇರವಾಗಿಟ್ಟುಕೊಳ್ಳಿ. ಕೈ ತಲೆಯ ಮೇಲಿರಲಿ. ಐದು ನಿಮಿಷಗಳ ಕಾಲ ಹೀಗೆ ಇರಿ. ನಂತ್ರ ಸಾಮಾನ್ಯ ಸ್ಥಿತಿಗೆ ಮರಳಿ. ಟವೆಲ್ ರೋಲ್ ವ್ಯಾಯಾಮದಲ್ಲಿ ಸಾಕಷ್ಟು ಭಂಗಿಗಳಿವೆ. ಈ ಎಲ್ಲ ಭಂಗಿಗಳೂ ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read