
ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಬಳಿ ಬರುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೆಸ್ಕಾಂ ಜೆಇ ಹಾಗೂ ಇನ್ನೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೆಸ್ಕಾಂ ಜೆಇ ಕಿರಣ್ (32) ಹಾಗೂ ನಾಗರಾಜ್ (49) ಮೃತರು. ಮೃತ ಕಿರಣ್ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು. ನಾಗರಾಜ್ ಅಜ್ಜಂಪುರ ತಾಲೂಕಿನವರಾಗಿದ್ದಾರೆ. ಇನ್ನು ಮೃತ ಕಿರಣ್ ಗೆ ಮುಂದಿನ ತಿಂಗಳು ಫೆಬ್ರವರಿ 8ರಂದು ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.

