HomeCrimeಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗುವಿನ ಹತ್ಯೆ; ಚಲಿಸುವ ರೈಲಿಂದ ಶವ ಎಸೆದ ಮಹಾತಾಯಿ....!

ಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗುವಿನ ಹತ್ಯೆ; ಚಲಿಸುವ ರೈಲಿಂದ ಶವ ಎಸೆದ ಮಹಾತಾಯಿ….!

ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ಹತ್ಯೆ ಮಾಡಿ ಚಲಿಸುವ ರೈಲಿಂದ ಎಸೆದಿದ್ದಾಳೆ. ಈ ಘಟನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ ಮಧ್ಯರಾತ್ರಿ ಮಹಿಳೆ ತನ್ನ ಮಗಳ ಕತ್ತು ಹಿಸುಕಿ ನಂತರ ತನ್ನ ಪ್ರಿಯಕರನ ಸಹಾಯದಿಂದ ಆಕೆಯ ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿದ್ದಳು. ನಂತರ ಇಬ್ಬರೂ ಶ್ರೀಗಂಗಾನಗರ ರೈಲು ನಿಲ್ದಾಣಕ್ಕೆ ಹೋಗಿ ರೈಲು ಹತ್ತಿ ಶವವನ್ನು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಎಸೆದಿದ್ದಾರೆ.

ಆರೋಪಿಗಳನ್ನು ಸುನೀತಾ ಮತ್ತು ಸನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದೆ. ಸುನೀತಾ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರೂ ಶವವನ್ನು ಕಾಲುವೆಯಲ್ಲಿ ಎಸೆಯಲು ಯೋಜಿಸಿದ್ದರು. ಆದರೆ ಅದು ರೈಲ್ವೆ ಹಳಿಗಳ ಬಳಿ ಬಿದ್ದಿದ್ದು ಮೃತ ಮಗುವಿನ ಶವ ಪತ್ತೆಯಾಗಿದೆ. ಬಾಲಕಿ ಶವವನ್ನು ಗುರುತಿಸಿದ ಬಳಿಕ ಪೊಲೀಸರು ಸುನೀತಾಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ. ಐದು ಮಕ್ಕಳನ್ನು ಹೊಂದಿರುವ ಆರೋಪಿ ಸುನೀತಾ, ಗೆಳೆಯ ಸನ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದಾರೆ. ಉಳಿದ ಮೂವರು ಮಕ್ಕಳು ಸುನೀತಾ ಪತಿಯೊಂದಿಗೆ ವಾಸಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular