HomeEntertainmentನನ್ನ ತಾಯಿಯ ಚಿಕಿತ್ಸೆಗೆ ಮುಖೇಶ್ ಅಂಬಾನಿ ಸಹಾಯ ಮಾಡ್ತಿದ್ದಾರೆ; ರಾಖಿ ಸಾವಂತ್

ನನ್ನ ತಾಯಿಯ ಚಿಕಿತ್ಸೆಗೆ ಮುಖೇಶ್ ಅಂಬಾನಿ ಸಹಾಯ ಮಾಡ್ತಿದ್ದಾರೆ; ರಾಖಿ ಸಾವಂತ್

ಮದುವೆ ಬಳಿಕ ಸಾಕಷ್ಟು ಸುದ್ದಿಯಾಗ್ತಿರುವ ನಟಿ ರಾಖಿ ಸಾವಂತ್ , ಕೆಲವು ದಿನಗಳ ಹಿಂದೆ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. ಇದೀಗ ತಮ್ಮ ತಾಯಿಯ ಚಿಕಿತ್ಸೆಗೆ ಮುಖೇಶ್ ಅಂಬಾನಿ ಸಹಾಯ ಮಾಡುತ್ತಿದ್ದಾರೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

ರಾಖಿ ಮುಂಬೈ ನಗರಕ್ಕೆ ಕಾಲಿಡುತ್ತಿದ್ದಂತೆ ಪಾಪರಾಜಿಗಳು ಸ್ವಾಗತಿಸಿ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಆಕೆಯ ತಾಯಿಯ ಆರೋಗ್ಯವನ್ನು ವಿಚಾರಿಸಿದರು. ಈ ವೇಳೆ ಮಾಹಿತಿ ನೀಡಿದ ರಾಖಿ ಸಾವಂತ್, ಈಗ ತನ್ನ ತಾಯಿಯನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಯಿಂದ ಕ್ರಿಟಿಕೇರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ಬಹಿರಂಗಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖೇಶ್ ಅಂಬಾನಿ ತನ್ನ ರಕ್ಷಣೆಗೆ ಬಂದಿದ್ದಾರೆ, ಅವರ ಸಹಾಯಕ್ಕಾಗಿ ಧನ್ಯವಾದಗಳು ಎಂದು ರಾಖಿ ಹೇಳಿದ್ದಾರೆ.
ತನ್ನ ತಾಯಿಗೆ ಈಗ ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ತನ್ನ ತಾಯಿಯ ಖಾಯಿಲೆ ಬಗ್ಗೆ ತಿಳಿದಿದ್ದ ರಾಖಿ ಸಾವಂತ್ ‘ಬಿಗ್ ಬಾಸ್ ಮರಾಠಿ’ಯಿಂದ 9 ಲಕ್ಷ ಮೌಲ್ಯದ ಬ್ರೀಫ್‌ಕೇಸ್ ತೆಗೆದುಕೊಂಡು ಸ್ವಯಂಪ್ರೇರಣೆಯಿಂದ ಕಾರ್ಯಕ್ರಮದಿಂದ ಹೊರನಡೆಯಲು ನಿರ್ಧರಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular