HomeEntertainmentಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು...

ಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು ಪತಿಗೆ ಮನವಿ

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಬಳಿಕ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹವಾಗಿರುವ ರಾಖಿ ಅದಕ್ಕಿಂತ ಮೊದಲು ಆತ ಕೊಡಿಸಿದ ದುಬಾರಿ ಗಿಫ್ಟ್ ಗಳ ಫೋಟೋಗಳನ್ನು ಹಾಕಿ ಸಂಭ್ರಮಿಸುತ್ತಿದ್ದರು.

ಬಳಿಕ ಇವರಿಬ್ಬರೂ ವಿವಾಹವಾಗಿದ್ದು, ಇದಕ್ಕಾಗಿ ರಾಖಿ ಸಾವಂತ್ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಪತಿ ಈ ವಿವಾಹವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಗೋಳಾಡಿದ್ದರು. ಆ ಬಳಿಕ ಆದಿಲ್ ಖಾನ್ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಮದುವೆಯನ್ನು ಒಪ್ಪಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದ ರಾಖಿ ಲವ್ ಯು ಲಾಟ್ ಎಂದು ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಇದೀಗ ರಾಖಿ ಸಾವಂತ್ ಮತ್ತೊಮ್ಮೆ ಮಾಧ್ಯಮದ ಮುಂದೆ ಗೋಳಾಡಿದ್ದಾರೆ. ನನ್ನನ್ನು ತೊರೆದು ವಾಪಸ್ ಬರುವಂತೆ ಮೈಸೂರಿನಿಂದ ಆದಿಲ್ ಖಾನ್ ಗೆ ಕರೆಗಳು ಬರುತ್ತಿದ್ದು, ಈ ರೀತಿ ಮಾಡಬೇಡ ಎಂದು ಪತಿಗೆ ಮನವಿ ಮಾಡಿಕೊಂಡಿದ್ದಾರೆ. ಹೀಗೆ ರಾಖಿ ಸಾವಂತ್ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದು, ನೆಟ್ಟಿಗರೂ ಕೂಡ ವ್ಯಂಗ್ಯಭರಿತ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular