ಇಂದು ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲನೆ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶುಭ್ಮನ್ ಗಿಲ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಈಗಾಗಲೇ ಭರ್ಜರಿ ಶತಕ ಸಿಡಿಸಿರುವ ಶುಭ್ಮನ್ ಗಿಲ್ ಕೇವಲ 19 ಏಕದಿನ ಪಂದ್ಯದಲ್ಲಿ ಸಾವಿರ ರನ್ ಪೂರೈಸುವ ಮೂಲಕ ಅತಿ ವೇಗವಾಗಿ ಸಾವಿರ ರನ್ ಪೂರೈಸಿರುವ ಭಾರತದ ಮೊದಲನೇ ಆಟಗಾರರಾಗಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ 24 ಪಂದ್ಯಗಳಲ್ಲಿ ಸಾವಿರ ರನ್ ಪೂರೈಸಿದ್ದರು. ಈ ದಾಖಲೆಯನ್ನು ಇಂದು ಶುಭ್ಮನ್ ಗಿಲ್ ಹಿಂದಿಕ್ಕಿದ್ದಾರೆ. ಮತ್ತೊಂದೆಡೆ ಏಕದಿನ ಕ್ರಿಕೆಟ್ ನಲ್ಲಿ ಇಂದು ತಮ್ಮ ಮೂರನೇ ಶತಕ ಸಿಡಿಸಿದ್ದಾರೆ.
6 6 & 6 Gill Smashed 200*(145)#ShubmanGill pic.twitter.com/799hf1IKZK
— AB Cricinfo (@ABCricinfo16) January 18, 2023

