HomeKarnatakaBIG NEWS: ಪ್ರಧಾನಿ ಮೋದಿ ರಾಜ್ಯ ಭೇಟಿಗೆ ಮಾಜಿ ಸಿಎಂ HDK ವ್ಯಂಗ್ಯ

BIG NEWS: ಪ್ರಧಾನಿ ಮೋದಿ ರಾಜ್ಯ ಭೇಟಿಗೆ ಮಾಜಿ ಸಿಎಂ HDK ವ್ಯಂಗ್ಯ

ವಿಜಯಪುರ: ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಪ್ರಧಾನಿ ಮೋದಿ ಭೇಟಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 25 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗೆ ಪ್ರಧಾನಿ ಮೋದಿ ಯಾವ ರೀತಿ ಸ್ಪಂದಿಸಲಿದ್ದಾರೆ ನೋಡೋಣ. ಹಕ್ಕುಪತ್ರ ವಿತರಣೆ ಎಂಬುದು ನಾಟಕ. ಏನೋ ಒಂದು ಕಾರ್ಯಕ್ರಮ ಮಾಡಬೇಕು ಎಂದು ಮಾಡುತ್ತಿದ್ದಾರಷ್ಟೇ ಎಂದು ಹೇಳಿದರು.

ರಾಜ್ಯ ಬಿಜೆಪಿಗೆ ಜನಪರ ಕೆಲಸ ಮಾಡುವ ಶಕ್ತಿಯಿಲ್ಲ. ಈಗ ಸ್ಕಾಡಾ ಯೋಜನೆ ಉದ್ಘಾಟನೆಗಾಗಿ ಮೋದಿ ಬರ್ತಿದ್ದಾರೆ. ನಾಳೆ ರೈತರಿಗೆ ಪ್ರಧಾನಿ ಮೋದಿ ಏನು ಸಂದೇಶ ಕೊಡ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular