HomeEntertainmentVideo | ಪತಿಗೆ ಖುಷಿಪಡಿಸಲು ಮರೆಯಲಾಗದಂತಹ ಕಾರ್ಯ ಮಾಡಿದ ನಟನ ಪತ್ನಿ

Video | ಪತಿಗೆ ಖುಷಿಪಡಿಸಲು ಮರೆಯಲಾಗದಂತಹ ಕಾರ್ಯ ಮಾಡಿದ ನಟನ ಪತ್ನಿ

ಮಾರ್ವೆಲ್ ಯೂನಿವರ್ಸ್‌ನಲ್ಲಿನ ‘ಥಾರ್’ ಪಾತ್ರಕ್ಕೆ ಹೆಸರುವಾಸಿಯಾದ ನಟ ಕ್ರಿಸ್ ಹೆಮ್ಸ್‌ವರ್ತ್ ಅವರು ಆನುವಂಶಿಕವಾಗಿ ಆಲ್ಝೈಮರ್‌ನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವರು ಕಳೆದ ನವೆಂಬರ್​ನಲ್ಲಿ ಬಹಿರಂಗಪಡಿಸಿದ್ದರು.

ನ್ಯಾಷನಲ್ ಜಿಯಾಗ್ರಫಿಕ್ ಸರಣಿಯ “ಲಿಮಿಟ್‌ಲೆಸ್” ಚಿತ್ರೀಕರಣ ಮಾಡುವಾಗ ಅವರಿಗೆ ತಮಗಿರುವ ಈ ಕಾಯಿಲೆಯ ಬಗ್ಗೆ ತಿಳಿದಿತ್ತು. ತಮ್ಮ ಕುಟುಂಬ ಮತ್ತು ಆರೋಗ್ಯದ ಮೇಲೆ ಕೇಂದ್ರೀಕರಿಸಲು ಅವರು ನಟನೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನನಗೆ ಬಂದಿರುವ ಈ ಭಯಾನಕ ಕಾಯಿಲೆಯಿಂದ ನಾನು ನನ್ನ ಹೆಂಡತಿ ಮತ್ತು ಮಕ್ಕಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಇದನ್ನು ಕಲ್ಪನೆ ಮಾಡಿಕೊಂಡರೆ ಭಯವಾಗುತ್ತದೆ” ಎಂದಿದ್ದರು.

ಅವರ ಪತ್ನಿ ಎಲ್ಸಾ ಪತಿಗಾಗಿ ಏನಾದರೂ ಮಾಡಲು ನಿರ್ಧರಿಸಿದ್ದು, ಅದರ ವಿಡಿಯೋ ಒಂದು ಈಗ ವೈರಲ್​ ಆಗಿದೆ. ಎಲ್ಸಾ ಅವರು ವೃತ್ತಿಪರ ಮೇಕ್ಅಪ್, ಪ್ರಾಸ್ಥೆಟಿಕ್ಸ್ ಮತ್ತು ವಿಗ್ ಸಹಾಯದಿಂದ ತಾವು ಖುದ್ದು 87 ವರ್ಷದವರಂತೆ ಕಾಣುವಂತೆ ಮಾಡಿಕೊಂಡರು. ಅದನ್ನು ಅವರು ಪತಿಗೆತೋರಿಸಿದ್ದು, ಅದೀಗ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಖಂಡಿತವಾಗಿಯೂ ಪತಿ ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular