Watch Video | ಮಹಿಳೆ ಮಾಡಿದ ಕೆಲಸ ಕಂಡು ಸುಸ್ತಾದ ನೆಟ್ಟಿಗರು

ಕೆಲವರು ಕೊಳಕು ಕೋಣೆಯಲ್ಲಿ ಯಾವುದೇ ಶುಚಿಕಾರ್ಯ ಮಾಡದೇ ದಿನಗಟ್ಟಲೇ ಇರಬಲ್ಲರು. ಆದರೆ ಇನ್ನು ಕೆಲವರಿಗೆ ಮನೆಯಲ್ಲಿ ಚೂರು ಧೂಳು ಇದ್ದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಆದರೆ ಮಹಿಳೆ ಜೀವವನ್ನೇ ಪಣಕ್ಕಿಟ್ಟು ಅಪಾರ್ಟ್​ಮೆಂಟ್​ ಕ್ಲೀನ್​ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಜನರು ಹೀಗೆಲ್ಲಾ ಮಾಡಬೇಡಿ ಎಂದು ಹೇಳಿದ್ದಾರೆ.  ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಿಟಕಿಯನ್ನು ಸ್ವಚ್ಛಗೊಳಿಸುವ ವೇಳೆ ಮಹಿಳೆ ಕಟ್ಟೆ ಮೇಲೆ ನಿಂತಿರುವುದನ್ನು ತೋರಿಸುತ್ತದೆ!

ಎಬಿಸಿ ನ್ಯೂಸ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮಹಿಳೆ ಯಾವುದೇ ಸುರಕ್ಷತಾ ಸರಂಜಾಮು ಇಲ್ಲದೆ ಅಪಾಯಕಾರಿಯಾದ ಕಿರಿದಾದ ಕಟ್ಟುಗಳ ಮೇಲೆ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಟ್ಟಡವು ಎಷ್ಟು ಎತ್ತರವಾಗಿದೆ ಎಂಬುದನ್ನು ತೋರಿಸಲು ಕ್ಯಾಮರಾ ಜೂಮ್ ಔಟ್ ಮಾಡಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಮಹಿಳೆಗೆ ಅಪಾಯ ಕಟ್ಟಿಟ್ಟ ಬುತ್ತಿ.

https://twitter.com/nitishshekhawa1/status/1614560461285953537

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read