HomeKarnatakaBIG NEWS: ಯೋಗಥಾನ್; ಯೋಗಾಸನ ಮಾಡುತ್ತಲೇ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು

BIG NEWS: ಯೋಗಥಾನ್; ಯೋಗಾಸನ ಮಾಡುತ್ತಲೇ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು

ಮೈಸೂರು: ಸಂಕ್ರಾಂತಿ ಸಂಭ್ರಮದ ನಡಿವೆಯೇ ರಾಜ್ಯಾದ್ಯಂತ ಗಿನ್ನೀಸ್ ಬುಕ್ ಅಫ್ ರೆಕಾರ್ಡ್ ದಾಖಲೆಗಾಗಿ ಯೋಗಥಾನ್ ಆಯೋಜಿಸಲಾಗಿದ್ದು, ಯೋಗಾಸನ ಮಾಡುವಾಗ ಅವಘಡವೊಂದು ಸಂಭವಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ನಡೆಯುತಿದ್ದ ಯೋಗಥಾನ್ ಕಾರ್ಯಕ್ರಮದ ವೇಳೆ ಯೋಗ ಮಾಡುತ್ತಲೇ ಮೂವರು ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ. ತೀವ್ರ ಚಳಿಯಿಂದಾಗಿ ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ವಿದ್ಯಾರ್ಥಿಗಳ ಕೈ-ಕಾಲು ಉಜ್ಜಿ ದೇಹದ ಉಷ್ಣತೆ ಹೆಚ್ಚಿಸಲಾಗಿದೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು, ಮೈಸೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಧಾರವಾಡ, ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಯೋಗಥಾನ್ ಕಾರ್ಯಕ್ರಮ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular