alex Certify ಸಿಂಹ ಎತ್ತಿಕೊಂಡು ಸಾಗಿದ ಮಹಿಳೆ…! ನೆಟ್ಟಿಗರು ಅಚ್ಚರಿ ಪಡುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹ ಎತ್ತಿಕೊಂಡು ಸಾಗಿದ ಮಹಿಳೆ…! ನೆಟ್ಟಿಗರು ಅಚ್ಚರಿ ಪಡುವ ವಿಡಿಯೋ ವೈರಲ್​

ಮನೆಯಲ್ಲಿ ಸಾಕಿದ ನಾಯಿ ಬೆಕ್ಕು ಇನ್ನಿತರ ಪ್ರಾಣಿಗಳನ್ನು ಎತ್ತಿಕೊಳ್ಳುವುದು ಸಹಜ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಮುದ್ದಾದ ಪ್ರಾಣಿಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಡಿಲಲ್ಲಿ ಸಿಂಹವನ್ನು ಹೊತ್ತುಕೊಂಡಿದ್ದು, ಅದೀಗ ವೈರಲ್​ ಆಗಿದೆ.

ಈ ವಿಡಿಯೋ 10 ಸೆಕೆಂಡ್‌ನದ್ದಾಗಿದ್ದು, ಇದರಲ್ಲಿ ಮಹಿಳೆ ಸಿಂಹವನ್ನು ತನ್ನ ಮಡಿಲಲ್ಲಿ ಹಿಡಿದುಕೊಂಡು ಎಲ್ಲೋ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸಿಂಹವು ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಇದನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ. ಈಕೆಯನ್ನು ವಂಡರ್ ವುಮನ್ ಎಂದು ಕರೆಯುತ್ತಿದ್ದಾರೆ. ಮಹಿಳೆ ಸಿಂಹವನ್ನು ಎಲ್ಲೋ ಕರೆದುಕೊಂಡು ಹೋಗುತ್ತಿರುವಂತೆ ತೋರುತ್ತಿದೆ. ಇದು ಕುವೈತ್‌ನ ವಿಡಿಯೋ ಆಗಿದ್ದು, ಮಹಿಳೆ ಸಿಂಹದ ಓನರ್ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯ ಮಾನಿಟರ್ ಪ್ರಕಾರ, ಸಿಂಹವು ಕುವೈತ್ ನಗರದ ವಸತಿ ಪಟ್ಟಣಕ್ಕೆ ಬಂದಿದ್ದರಿಂದ ಈ ರೀತಿ ವರ್ತಿಸಿದೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...