ಕಾಶಿ ಯಾತ್ರೆ ಕೈಗೊಳ್ಳುವವರಿಗೆ ಗುಡ್ ನ್ಯೂಸ್: ಮಹಾಶಿವರಾತ್ರಿ ಪ್ರಯುಕ್ತ 16500 ರೂ.ಗೆ 9 ದಿನ ‘ವಿಶೇಷ ಕಾಶಿ ಟೂರ್ ಪ್ಯಾಕೇಜ್’

ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ವಿಶೇಷ ಕಾಶಿ ಟೂರ್ ಪ್ಯಾಕೇಜ್ ಪ್ರಕಟಿಸಲಾಗಿದೆ. ಭಾರತೀಯ ರೈಲ್ವೇ, ಟ್ರಾವೆಲ್ಸ್ ಟೈಮ್ಸ್ ಇಂಡಿಯಾ ಟೂರಿಸಂ ಸಂಸ್ಥೆ ಸಹಯೋಗದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ 16,500 ರೂ.ಗೆ 9 ದಿನಗಳ ವಿಶೇಷ ಪ್ಯಾಕೇಜ್ ಟೂರ್ ಪ್ರಕಟಿಸಲಾಗಿದೆ.

ಪ್ರಸಿದ್ಧ ತೀರ್ಥಕ್ಷೇತ್ರಗಳಾದ ವಾರಣಾಸಿ, ಗಯಾ, ಪ್ರಯಾಗ್ ರಾಜ್, ಅಯೋಧ್ಯೆಗೆ ಭೇಟಿ ನೀಡಿ ದೇವರ ದರ್ಶನ ಮಾಡಿಸಲಾಗುವುದು. ಊಟ, ತಂಗುವ ಸ್ಥಳದ ಅನುಕೂಲ, ವೈದ್ಯಕೀಯ ವ್ಯವಸ್ಥೆ ಇರಲಿದೆ ಎಂದು ಟ್ರಾವೆಲ್ ಟೈಮ್ಸ್ ಇಂಡಿಯಾ ವ್ಯವಸ್ಥಾಪಕ ವಿಘ್ನೇಶ್ ತಿಳಿಸಿದ್ದಾರೆ.

16,500 ರೂ. ಮತ್ತು 18,750 ರೂ.ಗಳಿಂದ ಈ ವಿಶೇಷ ಪ್ಯಾಕೇಜ್ ಟೂರ್ ಪ್ರಾರಂಭವಾಗಲಿದ್ದು, ಒಟ್ಟು 600 ಜನ ಪ್ರಯಾಣಿಸುವ ರೈಲು ಇದಾಗಿದೆ. ಫೆಬ್ರವರಿ 12ರಂದು ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುವುದು. ಆನ್ಲೈನ್ ಬುಕಿಂಗ್ ಗಾಗಿ www.ularail.com, ಮೊಬೈಲ್ ಸಂಖ್ಯೆ 90436 85850, 96203 93938 ಗೆ ಕರೆ ಮಾಡಿ ಆಸನ ಕಾಯ್ದಿರಿಸಬಹುದಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read