
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಾರಜೋಳ, ಕಾಂಗ್ರೆಸ್ ನವರು ಬರೀ ಸುಳ್ಳು ಭರವಸೆಗಳನ್ನು ನೀಡುತ್ತ, ಘೋಷಣೆ ಮಾಡುತ್ತಿದ್ದಾರೆ. ನಾವು 75 ಯುನಿಟ್ ಘೋಷಿಸಿರಲಿಲ್ಲ, ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಸರ್ಕಾರ 75 ಯುನಿಟ್ ವಿದ್ಯುತ್ ಉಚಿತವಾಗಿ ಕೊಡ್ತಿದೆ ಎಂದರು.
ಸ್ವಾತಂತ್ರ್ಯ ಬಂದ್ಮೇಲೆ ದಲಿತರಿಗೆ ಮೋಸ ಮಾಡಿದ್ದೇ ಕಾಂಗ್ರೆಸ್. ಗರೀಬಿ ಹಠಾವೋ ಅಂದರು ಬಡತನ ನಿವಾರಣೆ ಆಯ್ತಾ? ಕೇವಲ ಕಾಂಗ್ರೆಸ್ ನವರ ಗರೀಬಿ ಹಠಾವೋ ಆಯ್ತು ಅಷ್ಟೇ. ಈಗಗಾಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಕೊಡುತ್ತಿದೆ. ಇವರೇನು ಕೊಡೋದು ಮತ್ತೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

