HomeKarnatakaBIG NEWS: ಸಾಲ ತೀರಿಸಲು ಕ್ಷೇತ್ರ ಬಿಟ್ಟುಕೊಟ್ರಾ ಶಾಸಕ ಶ್ರೀನಿವಾಸಗೌಡ ? ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ...

BIG NEWS: ಸಾಲ ತೀರಿಸಲು ಕ್ಷೇತ್ರ ಬಿಟ್ಟುಕೊಟ್ರಾ ಶಾಸಕ ಶ್ರೀನಿವಾಸಗೌಡ ? ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಬಿಟ್ಟುಕೊಟ್ಟ ಗುಟ್ಟು ಬಹಿರಂಗ; ಆಡಿಯೋ ವೈರಲ್

ಕೋಲಾರ: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರ ಹಿಂದಿನ ಗುಟ್ಟು ಬಯಲಾಗಿದೆ. ಸಾಲ ತೀರಿಸಲು ಶಾಸಕ ಶ್ರೀನೀವಾಸ ಗೌಡ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಶಾಸಕ ಶ್ರೀನಿವಾಸ್ ಗೌಡ ಹಾಗೂ ಮುಖಂಡರೊಬ್ಬರ ನಡುವಿನ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಈ ಹಿಂದೆ ಜೆಡಿಎಸ್ ನಿಂದ ಉಚ್ಛಾಟನೆಗೊಂಡಿದ್ದ ಶ್ರೀನಿವಾಸ್ ಗೌಡ, ಕಳೆದ ಚುನಾವಣೆಯಲ್ಲಿ 17 ಕೋಟಿ ರೂಪಾಯಿ ಸಾಲ ಮಾಡಿದ್ದೆ. ಈ ಸಾಲ ತೀರಿಸಲು ಸೀಟು ಬಿಟ್ಟುಕೊಟ್ಟಿದ್ದೇನೆ ಎಂದು ಶ್ರೀನಿವಾಸಗೌಡ ಮಾತನಾಡಿದ್ದಾರೆ ಎಂಬ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೆಡಿಎಸ್ ಮುಖಂಡ ಚನ್ನೇಗೌಡ ಎಂಬುವವರ ಜತೆ ಶಾಸಕ ಶ್ರೀನಿವಾಸ್ ಗೌಡ ಮಾತನಾಡಿದ್ದು, ಚನ್ನೇಗೌಡ ಎಂಬುವವರು ಯಾಕೆ ಸಿದ್ದರಾಮಯ್ಯ? ನೀವೇ ಬನ್ನಿ ನಿಮ್ಮನ್ನೇ ಗೆಲ್ಲಿಸುತೇವೆ ಎಂದು ಹೇಳುತ್ತಿದ್ದಂತೆ ಕಳೆದ ಬಾರಿ 17 ಕೋಟಿ ಖರ್ಚು ಮಾಡಿ ಸಾಲ ಮಾಡಿಕೊಂಡೆ. ಇನ್ನೂ ಸಾಲ ತೀರಿಲ್ಲ. ನನ್ನ ಗತಿ ಯಾರ್ ನೋಡೋದು? 17 ಕೋಟಿ ನೀವು ಕೊಟ್ಬಿಡ್ತೀರಾ? ಸಾಧ್ಯವಾಗುತ್ತಾ? ಅದ್ಕೆ ತೀರ್ಮಾನಕ್ಕೆ ಬಂದಿದ್ದೇನೆ. ಸಿದ್ದರಾಮಯ್ಯ ಅವರನ್ನು ನೀವೆಲ್ಲ ಸೇರಿ ಗೆಲ್ಲಿಸಿ. ನನ್ನನ್ನು ಎಂ ಎಲ್ ಸಿ ಮಾಡಿ ಮಂತ್ರಿ ಮಾಡ್ತಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖಂಡರೊಬ್ಬರ ಜೊತೆ ಶ್ರೀನಿವಾಸಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುತೂಹಲಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular