HomeKarnatakaBIG NEWS: ದೇಹದಾರ್ಢ್ಯ ಪಟು ಶವವಾಗಿ ಪತ್ತೆ

BIG NEWS: ದೇಹದಾರ್ಢ್ಯ ಪಟು ಶವವಾಗಿ ಪತ್ತೆ

ಬೆಂಗಳೂರು: ದೇಹದಾರ್ಢ್ಯ ಪಟುವೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ಹೀರಂಡಹಳ್ಳಿಯಲ್ಲಿ ನಡೆದಿದೆ.

ಶ್ರೀನಾಥ್ ಎಂಬ ದೇಹದಾರ್ಢ್ಯ ಪಟು ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಶ್ರೀನಾಥ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ. ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಡಿ ಫಾರ್ಮ್ ಓದುತ್ತಿದ್ದರು. ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲಿಯೂ ಭಾಗಿಯಾಗುತ್ತಿದ್ದರು.

ಇದೀಗ ಕೆ.ಆರ್. ಪುರಂ ಬಳಿ ತಾವು ವಾಸವಾಗಿದ್ದ ರೂಮಿನ ಕೊಠಡಿಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular