HomeIndiaಪರಿಚಿತನೊಂದಿಗೆ ಹೋದ ಬ್ಯೂಟಿಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ

ಪರಿಚಿತನೊಂದಿಗೆ ಹೋದ ಬ್ಯೂಟಿಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ: ಅಹಮದಾಬಾದ್ ನಗರದ ಫ್ಲಾಟ್‌ ನಲ್ಲಿ ಬ್ಯೂಟಿಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ನಂತರ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 49 ವರ್ಷದ ಮಹಿಳೆಗೆ ಆರೋಪಿಗಳಲ್ಲಿ ಒಬ್ಬ ಚೆನ್ನಾಗಿ ತಿಳಿದವನಾಗಿದ್ದಾನೆ. ಅವರು ಆಗಾಗ್ಗೆ ಒಟ್ಟಿಗೆ ಕಾರ್ಡ್ಸ್ ಆಡುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಶುಕ್ರವಾರ, ವ್ಯಕ್ತಿ ತನ್ನ ಕಾರ್ ನಲ್ಲಿ ಅಹಮದಾಬಾದ್‌ಗೆ ಇಸ್ಪೀಟ್ ಆಡಲು ತನ್ನ ಜೊತೆಯಲ್ಲಿ ಬರುವಂತೆ ಮಹಿಳೆಯನ್ನು ಕೇಳಿಕೊಂಡನು. ಪರಿಚಿತನಾಗಿದ್ದರಿಂದ ಮಹಿಳೆ ಅವನೊಂದಿಗೆ ಹೋಗಿದ್ದಾಳೆ. ಪ್ರಮುಖ ಆರೋಪಿಯ ಇಬ್ಬರು ಸ್ನೇಹಿತರು ಸಹ ಅವರೊಂದಿಗೆ ಸೇರಿಕೊಂಡರು. ಅಹಮದಾಬಾದ್‌ ನ ಫ್ಲಾಟ್‌ಗೆ ತಲುಪಿದ ನಂತರ, ಮೂವರು ಮದ್ಯ ಸೇವಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿಲೆ ಪಾರ್ಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರಥಮ ಮಾಹಿತಿ ವರದಿ ಉಲ್ಲೇಖಿಸಿ ತಿಳಿಸಿದ್ದಾರೆ.

ಸಂತ್ರಸ್ತೆ ಮುಂಬೈನಲ್ಲಿರುವ ತನ್ನ ಮನೆಗೆ ತಲುಪಿದ ನಂತರ ತನ್ನ ಪತಿಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದು, ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಸ್ನೇಹಿತ ಪರಾರಿಯಾಗಿದ್ದಾನೆ. ಅವರೆಲ್ಲರೂ ಮುಂಬೈನ ವಿವಿಧ ಉಪನಗರಗಳ ನಿವಾಸಿಗಳಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular