HomeIndiaನಿಲ್ದಾಣದಲ್ಲೇ 55 ಪ್ರಯಾಣಿಕರನ್ನು ಬಿಟ್ಟು ಹಾರಿದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್

ನಿಲ್ದಾಣದಲ್ಲೇ 55 ಪ್ರಯಾಣಿಕರನ್ನು ಬಿಟ್ಟು ಹಾರಿದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್

ಬೆಂಗಳೂರು ವಿಮಾನ ನಿಲ್ದಾಣದಿಂದ ಸೋಮವಾರ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಆದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ನಿರ್ದೇಶನಾಲಯ(ಡಿಜಿಸಿಎ) ಶೋಕಾಸ್ ನೋಟಿಸ್ ನೀಡಿದೆ.

ಬಹು ತಪ್ಪುಗಳು ಘಟನೆಗೆ ಕಾರಣವಾಗಿದೆ ಎಂದು ಡಿಜಿಸಿಎ ಹೇಳಿದ್ದು, ಸರಿಯಾದ ಸಂವಹನ, ಸಮನ್ವಯ, ಕೊರತೆಯಂತಹ ಬಹು ತಪ್ಪುಗಳು ಪರಿಸ್ಥಿತಿಗೆ ಕಾರಣವಾಗಿವೆ ಎಂದು ದೂರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಗೆ ಕ್ಷಮೆಯಾಚಿಸಿರುವ ಏರ್‌ಲೈನ್ಸ್ ತನ್ನ ಹೇಳಿಕೆಯಲ್ಲಿ, ಬೆಂಗಳೂರಿನಿಂದ ದೆಹಲಿಗೆ ಜಿ8 116 ವಿಮಾನದ ಹೊಂದಾಣಿಕೆಯಲ್ಲಿ ಅಚಾತುರ್ಯದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಮುಂದಿನ 12 ತಿಂಗಳಲ್ಲಿ ಯಾವುದೇ ದೇಶೀಯ ವಲಯದಲ್ಲಿ ಪ್ರಯಾಣಿಸಲು ಎಲ್ಲಾ ಬಾಧಿತ ಪ್ರಯಾಣಿಕರಿಗೆ ಒಂದು ಉಚಿತ ಟಿಕೆಟ್ ನೀಡಲು ಏರ್‌ಲೈನ್ ನಿರ್ಧರಿಸಿದೆ. ಘಟನೆಯ ಬಗ್ಗೆ ತನಿಖೆಯನ್ನು ಸಹ ಪ್ರಾರಂಭಿಸಿದೆ ಎಂದು ಗೋ ಫಸ್ಟ್ ಹೇಳಿದೆ,

ನಿಯಮಗಳ ಉಲ್ಲಂಘನೆಗಾಗಿ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಡಿಜಿಸಿಎ ಏರ್‌ ಲೈನ್‌ ನಿಂದ ಪ್ರತಿಕ್ರಿಯೆ ಕೇಳಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular