HomeInternationalಅಭ್ಯರ್ಥಿಗಳಿಗೆ ಕಾಫಿ ಕೊಟ್ಟು ಟ್ಯಾಲೆಂಟ್​ ಅಳೆಯುವ​ ಬಾಸ್....​!

ಅಭ್ಯರ್ಥಿಗಳಿಗೆ ಕಾಫಿ ಕೊಟ್ಟು ಟ್ಯಾಲೆಂಟ್​ ಅಳೆಯುವ​ ಬಾಸ್….​!

ಆಸ್ಟ್ರೇಲಿಯನ್ ಸಂಸ್ಥೆಯೊಂದರ ಬಾಸ್ ಉದ್ಯೋಗಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ಅವರ ಬಯೋಡೇಟಾ ನೋಡುವ ಬದಲು ಕಾಫಿ ಕಪ್​ನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂದು ಪರೀಕ್ಷೆ ಮಾಡಿದ್ದಾರೆ.

ಇಂಥದ್ದೊಂದು ಪರೀಕ್ಷೆ ಮಾಡಿರುವವರು ಸಾಫ್ಟ್‌ವೇರ್ ಸಂಸ್ಥೆ ಕ್ಸೆರೋದ ಟ್ರೆಂಟ್ ಇನ್ನೆಸ್ ಎನ್ನುವವರು. ಇದು ಹೇಗೆ ಎಂದು ಅಚ್ಚರಿಯಾ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂದರ್ಶನದ ಪ್ರಕ್ರಿಯೆಯಲ್ಲಿ ಸಂಭಾವ್ಯ ಅಭ್ಯರ್ಥಿಯನ್ನು ಭೇಟಿಯಾದಾಗ, ಬಾಸ್ ಅವರನ್ನು ಕಚೇರಿಯ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಕಾಫಿ ಕೊಡುತ್ತಾರೆ. ನಂತರ ಆ ಮಗ್​ ಜೊತೆಗೆ ಹೊರಗಡೆ ಬಂದು ಕಾಫಿ ಹೀರುತ್ತಾರೆ. ಕಾಫಿ ಖಾಲಿಯಾದ ಮೇಲೆ ಬಾಸ್​ ಗಮನಿಸುವುದು ಏನೆಂದರೆ ಅಭ್ಯರ್ಥಿ ಖಾಲಿ ಕಾಫಿ ಮಗ್​ ಅನ್ನು ಅಡುಗೆಮನೆಗೆ ಹಿಂತಿರುಗಿಸಲು ಹೋಗುತ್ತಾರೋ ಎಂದು.

ಒಂದು ವೇಳೆ ಹೀಗೆ ಹಿಂದಿರುಗಿಸಿದರೆ, ಅವರು ಕೆಲಸದ ಸ್ಥಳಕ್ಕೆ ಸೂಕ್ತವಾದರು ಎಂದು ಪರಿಗಣಿಸಲಾಗುತ್ತದೆ. ಆದರೆ ಅಲ್ಲಿಯೇ ಬಿಟ್ಟು ಹೋದರೆ ಆತ ಅನರ್ಹನೆಂದು ಪರಿಗಣಿಸಲಾಗುತ್ತದೆ. ಕಾಫಿ ಕಪ್​ ತೊಳೆದು ಇಟ್ಟರೆ ಸಂಸ್ಥೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಅರ್ಥ.

ಹೀಗೆ ತಾವು ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಹೇಳಿದ್ದು, ಇದು ಪರ-ವಿರೋಧ ನಿಲುವನ್ನು ಪಡೆದುಕೊಳ್ಳುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular