HomeEntertainmentಚಿಕ್ಕಮ್ಮನಂತೆಯೇ ಬ್ಯಾಲೆ ನೃತ್ಯ ಮಾಡಲು ನೋಡಿದ ಪುಟಾಣಿ: ನೆಟ್ಟಿಗರ ಹೃದಯ ಗೆದ್ದ ಕ್ಯೂಟ್ ವಿಡಿಯೋ

ಚಿಕ್ಕಮ್ಮನಂತೆಯೇ ಬ್ಯಾಲೆ ನೃತ್ಯ ಮಾಡಲು ನೋಡಿದ ಪುಟಾಣಿ: ನೆಟ್ಟಿಗರ ಹೃದಯ ಗೆದ್ದ ಕ್ಯೂಟ್ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೆರೈಟಿ ವೆರೈಟಿ ವಿಡಿಯೋಗಳನ್ನ ನೀವು ನೋಡಿರ್ತಿರಾ. ಅದರಲ್ಲಿ ಕೆಲ ವಿಡಿಯೋಗಳು ಪುಟ್ಟ ಪುಟಾಣಿ ಮಕ್ಕಳದ್ದು ಇರುತ್ತೆ. ಅವರು ಆಡೋ ಆಟಗಳು, ತುಂಟಾಟಗಳು ಕ್ಯಾಮರಾ ಕಣ್ಣಲ್ಲಿ ಆಗಾಗ ಸೆರೆಯಾಗುತ್ತಲೇ ಇರುತ್ತೆ. ಅದೇ ವಿಡಿಯೋಗಳು ಸೊಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದಾಗ, ಅದು ಜನರ ಹೃದಯವನ್ನೇ ಗೆದ್ದಿರುತ್ತೆ.

ಈ ವಿಡಿಯೋ ನೋಡಿ ಇತ್ತಿಚೆಗೆ ವೈರಲ್ ಆಗಿರುವ ವಿಡಿಯೋ. ಇಲ್ಲಿ ಒಂದು ಪುಟ್ಟ ಮಗು ತನ್ನ ಚಿಕ್ಕಮ್ಮನ ಜೊತೆ ಆಟ ಆಡ್ತಿರುತ್ತೆ. ಆಟ ಆಡ್ತಿರುವಾಗಲೇ ಆ ಮಗುವಿನ ಚಿಕ್ಕಮ್ಮ ಬ್ಯಾಲೆ ನೃತ್ಯವನ್ನ ಮಾಡಲು ಆರಂಭಿಸುತ್ತಾಳೆ. ಏನೂ ಅರಿಯದ ಆ ಮುಗ್ಧ ಕಂದಮ್ಮ ತನ್ನ ಚಿಕ್ಕಮ್ಮ ಮಾಡಿದಂತೆಯೇ ಮಾಡಲು ಪ್ರಯತ್ನಿಸುತ್ತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಮ್ಮ ಲೌರಾಳಂತೆಯೇ ನಕಲು ಮಾಡಿದ ಮಗುವಿನ ಈ ವಿಡಿಯೋ, ನೋಡಲು ಸಖತ್ ಫನ್ನಿಯಾಗಿದೆ. ಈ ವಿಡಿಯೋ ಆ ಮಗುವಿನ ಅಮ್ಮ ರೆಗಿ ತನ್ನ ಕಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ಕ್ಯೂಟ್ ವಿಡಿಯೋ, 5 ಮಿಲಿಯನ್‌ ಗೂ ಹೆಚ್ಚು ವೀಕ್ಷಣೆಗಳನ್ನ ಪಡೆದಿದೆ.

ಚಿಕ್ಕಮ್ಮ ಲೌರಾ ಹಾಗೂ ಪುಟಾಣಿ ಲೇನಿ ಇವರಿಬ್ಬರ ಈ ವಿಡಿಯೋ ನೋಡಿ ಎಂಜಾಯ್ ಮಾಡ್ತಿದ್ದಾರೆ. ಅದರಲ್ಲೂ ಲೇನಿ ಪುಟಾಣಿ ಚಿಕ್ಕಮ್ಮನಂತೆಯೇ ಡಾನ್ಸ್ ಮಾಡುವ ಪ್ರಯತ್ನ ಎಲ್ಲರಿಗೂ ಖುಷಿ ಕೊಡ್ತಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ ‘ಲೌರಾನೇ ಈ ಪುಟಾಣಿಗೆ ಆದರ್ಶ’ ಎಂದು ಬರೆಯಲಾಗಿದೆ.

ಇದು ಅತ್ಯಂತ ಮುದ್ದಾದ ವಿಡಿಯೋ ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಮಗು ಈ ವಯಸ್ಸಿನಲ್ಲಿ ಮಾಡುತ್ತಿರೋ ಪ್ರಯತ್ನ ನೋಡಿ ಶಾಕ್ ಆಗಿದ್ದಾರೆ. ಕೆಲವರಂತೂ ಮಗು ಬಿಡದೇ ಮಾಡ್ತಿರೋ ಪ್ರಯತ್ನ ನೋಡಿ ಈ ಮಗುವಿನಿಂದ ಕಲಿಯುವುದು ತುಂಬಾ ಇದೆ ಅಂತ ಕೂಡಾ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular