ಸಂಪೂರ್ಣ ಮದ್ಯ ನಿಷೇಧವಿರುವ ಬಿಹಾರದಲ್ಲಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿದ್ದಾನೆಂದು ಆರೋಪಿಸಿ ಪೊಲೀಸರು ಆತನನ್ನು ಕಂಬಿ ಹಿಂದೆ ಕಳಿಸ್ತಿದ್ದಂತೆ ಆತ ಸಿಂಗರ್ ಆಗಿದ್ದಾನೆ. ಕುಡಿದಿದ್ದಾನೆಂದು ಆರೋಪಿಸಿ ಕಂಬಿ ಹಿಂದೆ ಹಾಕಲಾದ ವ್ಯಕ್ತಿ ಪೊಲೀಸ್ ಸ್ಟೇಷನ್ ನ ಲಾಕಪ್ ನಲ್ಲಿ ನಿಂತು ಮಧುರವಾಗಿ ಹಾಡಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಕನ್ಹಯ್ಯಾ ಕುಮಾರ್ ಎಂದು ಹೆಸರಿಸಲಾದ ಆರೋಪಿ ಪೊಲೀಸ್ ಠಾಣೆಯಲ್ಲಿನ ಲಾಕಪ್ ನಲ್ಲಿ ನಿಂತು ಪವನ್ ಸಿಂಗ್ ಅವರ “ದರೋಗಾ ಜಿ” ಹಾಡನ್ನು ತನ್ನ ಮಧುರ ಧ್ವನಿಯಲ್ಲಿ ಹಾಡುವುದನ್ನು ಕೇಳಬಹುದು.
ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಆತ ಭಾವಪೂರ್ಣವಾಗಿ ಹಾಡನ್ನು ಹಾಡುತ್ತಿದ್ದು ನೆರೆದಿದ್ದವರು “ವಾಹ್, ವಾಹ್,” ಎಂದು ಉದ್ಗರಿಸಿದ್ದಾರೆ.