ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರ ನಡುವೆ ಗಲಾಟೆ: 2 ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರಿಗೆ ಗಾಯ

ಶಿವಮೊಗ್ಗ: ಶಿವಮೊಗ್ಗ ಮತ್ತು ಶಿರಾಳಕೊಪ್ಪದಲ್ಲಿ ಅನ್ಯಕೋಮಿನ ಯುವಕರ ಮಧ್ಯ ಗಲಾಟೆ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಯುವಕರಿಗೆ ಗಾಯಗಳಾಗಿವೆ.

ಶಿವಮೊಗ್ಗದಲ್ಲಿ ಈಜಲು ಹೋಗಿದ್ದಾಗ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ಯುವಕರು ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಅಪ್ರಾಪ್ತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ ಅನ್ಯಕೋಮಿನವರಿಂದ ಹಲ್ಲೆ ನಡೆದಿದೆ. ವೇಗವಾಗಿ ಹಾಗೂ ನಿರ್ಲಕ್ಷದಿಂದ ಬೈಕ್ ಚಲಾಯಿಸಬೇಡ ಎಂದು ಹೇಳಿದ್ದಕ್ಕೆ ಶಿರಾಳಕೊಪ್ಪದ ಮಾರ್ಕೆಟ್ ನಲ್ಲಿ ಮಂಜುನಾಥ ಮತ್ತು ಸುರೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ನನಗೆ ಬುದ್ಧಿವಾದ ಹೇಳುತ್ತಿಯಾ ಎಂದು ತೂಕ ಮಾಡುವ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ಅನ್ಯಕೋಮಿನವರು ಮತ್ತು ಮಂಜುನಾಥ್, ಸುರೇಶ್ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read