HomeCrimeಅತ್ಯಾಚಾರ ಆರೋಪಿ ತಾಯಿಗೆ ಶೂಟ್‌ ಮಾಡಿದ ಅಪ್ರಾಪ್ತೆ

ಅತ್ಯಾಚಾರ ಆರೋಪಿ ತಾಯಿಗೆ ಶೂಟ್‌ ಮಾಡಿದ ಅಪ್ರಾಪ್ತೆ

ಅತ್ಯಾಚಾರ ಆರೋಪಿ ತಾಯಿ ಮೇಲೆ ಯುವತಿ ಗುಂಡು ಹಾರಿಸಿದ್ದು ಆಕೆಯನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. 50 ವರ್ಷದ ಮಹಿಳೆ ಖುರ್ಷಿದಾ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಹದಿಹರೆಯದ ಯುವತಿಯನ್ನ ಬಂಧಿಸಿದ್ದು, ಸಂತ್ರಸ್ತೆ ಖುರ್ಷೀದಾ ಅವರನ್ನು ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಶನಿವಾರ ಸಂಜೆ ಯುವತಿ, ಖುರ್ಷೀದಾ ಅವರ ಕಿರಾಣಿ ಅಂಗಡಿಗೆ ನುಗ್ಗಿ ಪಿಸ್ತೂಲಿನಿಂದ ಗುಂಡು ಹಾರಿಸಿದ ಘಟನೆ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಆಪಾದಿತ ಶೂಟರ್ 16 ರಿಂದ 17 ವರ್ಷ ವಯಸ್ಸಿನವಳಾಗಿದ್ದು, ಖುರ್ಷೀದಾ ಅವರ ಪುತ್ರನ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ಈ ಹಿಂದೆ ಪೊಲೀಸರಿಗೆ ವರದಿ ಸಲ್ಲಿಸಿದ್ದರು.

ಆಪಾದಿತ ಹುಡುಗಿ 2021 ರಲ್ಲಿ ಖುರ್ಷಿದಾ ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328 (ನೋಯಿಸುವ ಉದ್ದೇಶದಿಂದ ಮಾದಕ ದ್ರವ್ಯವನ್ನು ನೀಡುವುದು), 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹದಿಹರೆಯದ ಹುಡುಗಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಶೂಟಿಂಗ್‌ಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular