HomeKarnatakaಗಾಂಜಾ ಮತ್ತಿನಲ್ಲಿ ಈತ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ

ಗಾಂಜಾ ಮತ್ತಿನಲ್ಲಿ ಈತ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ

ಬೆಂಗಳೂರು: ಗಾಂಜಾ ಮತ್ತಿನಲ್ಲಿ ಇರೋವ್ರಿಗೆ ತಾವೇನು ಮಾಡ್ತಾ ಇದ್ದೇವೆ ಅನ್ನೋದು ಕೂಡ ಗೊತ್ತಾಗಲ್ಲ. ಈ ಗಾಂಜಾ ಏಟಲ್ಲಿ ಅದೆಷ್ಟೋ ಹೊಡೆದಾಟ, ಕೊಲೆಗಳೆ ಆಗೋಗಿವೆ. ಇದೀಗ ಇಲ್ಲೊಬ್ಬ ವ್ಯಕ್ತಿ ಗಾಂಜಾ ಹೊಡೆದ ಮತ್ತಿನಲ್ಲಿ ಪೊಲೀಸರಿಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ.

ಹೌದು, ನಗರದ ಯಶವಂತಪುರದ ಎಂಇಐ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಚರಂಡಿಗೆ ಬಿದ್ದಿದ್ದಾನೆ. ನಂತರ ಅಲ್ಲಿಂದ ಎದ್ದು ಬಂದವನೆ, ಇನ್ನೂ ಮೂವತ್ತು ಜನ ಚರಂಡಿಯೊಳಗಿದ್ದಾರೆ ಎಂದು ಹೇಳಿದ್ದಾನೆ. ಅವನ ಮಾತಿಗೆ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲು ಈತ ಸ್ಥಳೀಯರ ಬಳಿ ಮಾತನಾಡಿದ್ದಾನೆ. ಅವರು ಡೀಟೇಲ್ ಕೇಳಿದ್ರೆ, ಶ್ರೀರಾಂಪುರದಿಂದ ಚರಂಡಿಯೊಳಗೆ ಬಂದಿದ್ದೀನಿ. ಇನ್ನೂ 30 ಜನ ಒಳಗಿದ್ದಾರೆ ಅವ್ರು ಬರ್ತಾರೆ ಎಂದಿದ್ದಾನೆ. ಅವನ ಮಾತಿಗೆ ಬೆಚ್ವಿ ಬಿದ್ದ ಜನ ಗಾಬರಿಗೊಂಡು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಆದ್ರೆ ಚರಂಡಿಯಿಂದ ಯಾರು ಬಾರದ ಕಾರಣ ಮತ್ತಿನಲ್ಲಿದ್ದ ವ್ಯಕ್ತಿಯನ್ನ ಆರ್.ಎಂ.ಸಿ. ಯಾರ್ಡ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular