alex Certify ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ಜೀವನಾಂಶ ಪಡೆಯಲು ಅರ್ಹ; ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ಜೀವನಾಂಶ ಪಡೆಯಲು ಅರ್ಹ; ಹೈಕೋರ್ಟ್ ಮಹತ್ವದ ತೀರ್ಪು

ಮುಸ್ಲಿಂ ಮಹಿಳೆಯರ ವಿಚ್ಛೇದನ ಕುರಿತಂತೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿಚ್ಛೇದನ ಪಡೆದ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ತಿಳಿಸಿದೆ.

ಪ್ರಕರಣದ ವಿವರ: ಜೈದಾ ಖಾತೂನ್ ಎಂಬವರಿಂದ ಅವರ ಪತಿ ನರುಲ್ ಹಕ್ 11 ವರ್ಷಗಳ ದಾಂಪತ್ಯದ ಬಳಿಕ ಘಾಜಿಪುರದ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದಿದ್ದರು. ಈ ಸಂದರ್ಭದಲ್ಲಿ ತಮ್ಮ ಮಾಜಿ ಪತ್ನಿಗೆ ‘iddat’ ಅವಧಿ ಅಂದರೆ ವಿಚ್ಛೇದನ ಪಡೆದ ಮೂರು ತಿಂಗಳು 13 ದಿನಗಳ ಅವಧಿಗೆ ಜೀವನಾಂಶ ನೀಡಲು ಆದೇಶಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಜೈದಾ ಖಾತೂನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪ್ರಕಾಶ್ ಕೇಸರ್ವಾನಿ ಹಾಗೂ ಮಹಮ್ಮದ್ ಅಝರ್ ಹುಸೇನ್ ಇದ್ರಿಸ್ ಅವರುಗಳಿದ್ದ ಪೀಠ ನಡೆಸಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಲಾಗಿದೆ. ಅಲ್ಲದೆ ವಿಚ್ಛೇದಿತ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ಜೀವನಾಂಶ ನೀಡುವಂತೆ ಆದೇಶಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...