HomeEntertainmentದಳಪತಿ ವಿಜಯ್ ಕುಟುಂಬದಲ್ಲಿ ಕಲಹ ? 22 ವರ್ಷದ ದಾಂಪತ್ಯ ಜೀವನಕ್ಕೆ ಬೀಳಲಿದೆಯಾ ಬ್ರೇಕ್‌ ?

ದಳಪತಿ ವಿಜಯ್ ಕುಟುಂಬದಲ್ಲಿ ಕಲಹ ? 22 ವರ್ಷದ ದಾಂಪತ್ಯ ಜೀವನಕ್ಕೆ ಬೀಳಲಿದೆಯಾ ಬ್ರೇಕ್‌ ?

ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಒಂದಾದ ಮೇಲೆ ಒಂದು ಸೂಪರ್‌ ಹಿಟ್ ಸಿನೆಮಾ ಕೊಟ್ಟವರು. ಈಗ ಇದೇ ದಳಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಎರಡು ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಒಂದನೇಯದ್ದು ಜನವರಿ 12 ರಂದು ಬಿಡುಗಡೆಯಾಗಲಿರುವ ಇವರ ‘ವಾರಿಸು’ ಸಿನೆಮಾ. ಇದರ ನಡುವೆಯೇ ಕಾಳ್ಗಿಚ್ಚಿನಂತೆ ಹರಡಿರುವುದು ಇವರ ವಿಚ್ಛೇದನ ಸುದ್ದಿ.

ನಟ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಜೊತೆಗಿನ 22 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಬೀಳಲಿದೆ ಅನ್ನೊ ಸುದ್ದಿ ಎಲ್ಲೆಲ್ಲೂ ಹರಿದಾಡ್ತಿದೆ. ಇವರ ಸಂಸಾರದಲ್ಲಿ ಉಂಟಾಗಿರುವ ಕಲಹವೇ ಇದಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಸದ್ಯಕ್ಕೆ ಈಗ ದಳಪತಿ ವಿಜಯ್ ಆಗಲಿ ಇಲ್ಲಾ ಸಂಗೀತಾ ಅವರಾಗಲಿ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ಅವರಿಂದ ದೂರ ಇದ್ದಾರಾ ಎಂಬಂತಹ ಅನುಮಾನ ಹಲವರಿಗೆ ಮೂಡಿದೆ. ಅದಕ್ಕೆ ಕಾರಣ ಇಷ್ಟೇ……. ಇತ್ತೀಚಿನ ದಿನಗಳಲ್ಲಿ ಈ ಜೋಡಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ನಿರ್ದೇಶಕ ಅಡ್ಡಿ ಅವರ ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ ವಿಜಯ್ ಪತ್ನಿ ಸಂಗೀತಾ ಕಾಣಿಸಿಕೊಳ್ಳಲಿಲ್ಲ. ಅಲ್ಲದೇ ‘ವಾರಿಸು ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲೂ ಅವರು ಗೈರಾಗಿದ್ದರು. ಹಾಗಾಗಿ ಡಿವೋರ್ಸ್ ವದಂತಿ ಹಬ್ಬಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟೆಲ್ಲ ಅಂತೆ-ಕಂತೆಗಳು ಹಬ್ಬಿದ್ದರೂ ಕೂಡ ಅಸಲಿ ವಿಷಯ ಬೇರೆಯೇ ಇದೆ ಎನ್ನುತ್ತಿವೆ ಕೆಲವು ಮೂಲಗಳು. ಪ್ರಸ್ತುತ ಸಂಗೀತಾ ಅವರು ಮಕ್ಕಳ ಜೊತೆ ಫಾರಿನ್ ಟ್ರಿಪ್ ತೆರಳಿದ್ದಾರೆ. ಆ ಕಾರಣದಿಂದ ಅವರು ಭಾರತದಲ್ಲಿ ಕೆಲವು ಸಮಾರಂಭಗಳಿಗೆ ಹಾಜರಿ ಹಾಕಲು ಸಾಧ್ಯವಾಗಿಲ್ಲ. ಅದನ್ನೇ ಕಾರಣವಾಗಿ ಇಟ್ಟುಕೊಂಡು ಕೆಲವರು ಗಾಸಿಪ್ ಹಬ್ಬಿಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.

ಸಂಗೀತಾ ಮತ್ತು ದಳಪತಿ ವಿಜಯ್ ಮದುವೆ ಆಗಿದ್ದು 1999ರ ಆಗಸ್ಟ್ 25ರಂದು. ಇವರದ್ದು ಲವ್ ಮ್ಯಾರೇಜ್. ವಿಜಯ್ ಅವರ ನಟನೆಗೆ ಸಂಗೀತಾ ಫ್ಯಾನ್ ಆಗಿದ್ದರು. ಸಿನಿಮಾವೊಂದರ ಶೂಟಿಂಗ್ ವೇಳೆ ವಿಜಯ್ ಅವರನ್ನು ಸಂಗೀತಾ ಭೇಟಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಆ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಪ್ರೀತಿ ಹುಟ್ಟಿತು. ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ನೆರವೇರಿತ್ತು.

For Latest News Updates, Join Our Whatsapp Community🚩
RELATED ARTICLES

Most Popular