HomeKarnatakaBIG NEWS: ನೈತಿಕತೆ, ಮೌಲ್ಯ ಇಲ್ಲದ ಪಪ್ಪಿ ಸಿದ್ದರಾಮಯ್ಯ; ಸಚಿವ ಅಶ್ವತ್ಥನಾರಾಯಣ ಕಿಡಿ

BIG NEWS: ನೈತಿಕತೆ, ಮೌಲ್ಯ ಇಲ್ಲದ ಪಪ್ಪಿ ಸಿದ್ದರಾಮಯ್ಯ; ಸಚಿವ ಅಶ್ವತ್ಥನಾರಾಯಣ ಕಿಡಿ

ರಾಮನಗರ: ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಮುಂದೆ ನಾಯಿಮರಿಯಂತೆ ಇರ್ತಾರೆ ಎಂಬ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಪಪ್ಪಿ ಎಂದು ಸಚಿವ ಅಶ್ವತ್ಥನಾರಾಯಣ ವಾಕ್ಸಮರ ನಡೆಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಸಿದ್ದರಾಮಯ್ಯನವರ ಪಕ್ಷ ಕುಟುಂಬದ ಪಕ್ಷ. ಆತ್ಮಸಾಕ್ಷಿ, ಗೌರವ ಇದ್ರೆ ಮೊದಲು ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರಿಗೆ ಬುದ್ಧಿಭ್ರಮಣೆಯಾಗಿದೆ. ನೈತಿಕತೆ, ಮೌಲ್ಯ ಇಲ್ಲದ ಪಪ್ಪಿ ಸಿದ್ದರಾಮಯ್ಯ. ಅವರಿಗೆ ಆತ್ಮಸಾಕ್ಷಿ, ಗೌರವ ಎನ್ನುವುದಿದ್ದರೆ ಒಂದು ಕ್ಷಣ ಕಾಂಗ್ರೆಸ್ ನಲ್ಲಿರದೇ ರಾಜೀನಾಮೆಯನ್ನು ಕೊಡಲಿ ಎಂದು ಗುಡುಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular