ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಸುಪರ್ದಿಗೆ ಪಡೆದ ನಂತರ ಬಹಳ ಕೋಲಾಹಲವೇ ಸೃಷ್ಟಿಯಾಗಿದೆ. ಟ್ವಿಟರ್ನ ಅಸಂಖ್ಯ ಉದ್ಯೋಗಿಗಳನ್ನು ಮಸ್ಕ್ ತೆಗೆದು ಭಾರಿ ವಿವಾದಕ್ಕೀಡಾಗಿರುವ ನಡುವೆಯೇ ಈತ ಮತ್ತೊಂದು ಸುದ್ದಿ ಹೊರಬಂದಿದೆ.
ಅದೇನೆಂದರೆ ಟ್ವಿಟರ್ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಸ್ವಂತ ಟಾಯ್ಲೆಟ್ ಪೇಪರ್ ತಂದು ಕಚೇರಿಯಲ್ಲಿ ಬಳಸುತ್ತಿದ್ದಾರೆ !
ಇದಕ್ಕೆ ಕಾರಣವೇನೆಂದರೆ, ಕೆಲಸ ಕಳೆದುಕೊಂಡ ಉದ್ಯೋಗಿಗಳಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರೂ ಸೇರಿದ್ದಾರೆ. ಆದ್ದರಿಂದ ಟಾಯ್ಲೆಟ್ ಪೇಪರ್ ಖರೀದಿ ಮಾಡುತ್ತಿಲ್ಲ.
ಸಾಲದು ಎಂಬುದಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಕೆಲಸವರು ಇಲ್ಲದೇ ಅಲ್ಲಿ ವಾಸನೆ ಬರುತ್ತಿರುವುದರಿಂದ ಟಾಯ್ಲೆಟ್ ಪೇಪರ್ಗಳನ್ನು ಖುದ್ದು ತರುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ ಭಾರಿ ಟ್ರೋಲ್ಗೆ ಒಳಗಾಗುತ್ತಿದೆ.