alex Certify ಒಂದು ಕಪ್ ಹಾಲಿನ ಜೊತೆ ಒಂದು ಖರ್ಜೂರದ ಲಾಡು ಸೇವನೆ ಮಾಡಬಲ್ಲದು ಆರೋಗ್ಯಕ್ಕೆ ಮ್ಯಾಜಿಕ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕಪ್ ಹಾಲಿನ ಜೊತೆ ಒಂದು ಖರ್ಜೂರದ ಲಾಡು ಸೇವನೆ ಮಾಡಬಲ್ಲದು ಆರೋಗ್ಯಕ್ಕೆ ಮ್ಯಾಜಿಕ್‌…!

ಖರ್ಜೂರವು ಅತ್ಯಂತ ಶಕ್ತಿಯುತವಾದ ಡ್ರೈಫ್ರೂಟ್‌. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಪ್ರಯೋಜನಕಾರಿ ಕೊಬ್ಬುಗಳು, ನಾರು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳಂತಹ ಗುಣಗಳ ಉಗ್ರಾಣ ಖರ್ಜೂರ. ಇದನ್ನು ಸೇವಿಸುವುದರಿಂದ ಹೃದಯ ಮತ್ತು ಮೆದುಳು ಆರೋಗ್ಯಕರವಾಗಿರುತ್ತದೆ.

ಖರ್ಜೂರ ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಖರ್ಜೂರವನ್ನು ಸೇವಿಸುವುದರಿಂದ ದೀರ್ಘಕಾಲದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ಸಹ ಇದು ರಾಮಬಾಣಕ್ಕಿಂತ ಕಡಿಮೆಯಿಲ್ಲ. ಖರ್ಜೂರವು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ, ಇದರಿಂದ ನಿಮ್ಮ ದೇಹವು ಸದೃಢವಾಗಿರುತ್ತದೆ. ಪ್ರತಿದಿನ ಒಂದು ಲೋಟ ಹಾಲಿನ ಜೊತೆಗೆ ಒಂದು ಖರ್ಜೂರದ ಲಾಡನ್ನು ಸೇವಿಸಬೇಕು. ಖರ್ಜೂರದ ಲಾಡು ಮಾಡುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು: ಗೋಧಿ ಹಿಟ್ಟು 1/2 ಕಪ್, ಖರ್ಜೂರ 200 ಗ್ರಾಂ, ತುರಿದ ತೆಂಗಿನಕಾಯಿ 2 ಚಮಚ, ತುಪ್ಪ 1 ಚಮಚ, ಬಾದಾಮಿ 2 ಟೀಸ್ಪೂನ್, ಒಣದ್ರಾಕ್ಷಿ 1 ಟೀಸ್ಪೂನ್, ಗೋಡಂಬಿ  ನಾಲ್ಕಾರು, ಪಿಸ್ತಾ ನಾಲ್ಕಾರು, ಕತ್ತರಿಸಿದ ಮಖಾನಾ ಒಂದು ಟೇಬಲ್‌ ಸ್ಪೂನ್‌ನಷ್ಟು.

ಮಾಡುವ ವಿಧಾನ: ಮೊದಲು ಖರ್ಜೂರವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಒಳಗಿನ ಬೀಜವನ್ನು ತೆಗೆದು ಖರ್ಜೂರವನ್ನು ಒಂದು ಪಾತ್ರೆಯಲ್ಲಿ ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಇದಾದ ನಂತರ ಬಾಣಲೆಗೆ ತುಪ್ಪ ಹಾಕಿ ಕರಗಿಸಿ. ನಂತರ ಅದಕ್ಕೆ ತೆಂಗಿನಕಾಯಿ ಮತ್ತು ಎಲ್ಲಾ ಡ್ರೈಫ್ರೂಟ್‌ಗಳನ್ನು ಸೇರಿಸಿ, ಸುಮಾರು 2 ನಿಮಿಷಗಳ ಕಾಲ ಫ್ರೈ ಮಾಡಿ. ಹುರಿದ ಡ್ರೈಫ್ರೂಟ್‌ಗಳನ್ನು ತಟ್ಟೆಗೆ ಹಾಕಿಟ್ಟುಕೊಂಡು ಬಾಣಲೆಗೆ ತುಪ್ಪ ಹಾಕಿ ಕರಗಿಸಿ, ಅದಕ್ಕೆ ಗೋಧಿ ಹಿಟ್ಟು ಸೇರಿಸಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ಖರ್ಜೂರವನ್ನು ಮಿಕ್ಸಿಯಲ್ಲಿ ಹಾಕಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ನಂತರ  ತುಪ್ಪದೊಂದಿಗೆ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಈ ಎಲ್ಲಾ ವಸ್ತುಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ಸ್ವಲ್ಪ ತಣ್ಣಗಾದಾಗ, ಮಧ್ಯಮ ಗಾತ್ರದ ಲಾಡುಗಳನ್ನು ತಯಾರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...