HomeAstroಈ ರಾಶಿಯವರಿಗಿದೆ ಮನೆಯಲ್ಲಿ ಶುಭ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ

ಈ ರಾಶಿಯವರಿಗಿದೆ ಮನೆಯಲ್ಲಿ ಶುಭ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ

ಮೇಷ ರಾಶಿ

ಇಂದು ಸಮೀಪದ ಸ್ಥಳಕ್ಕೆ ಪ್ರಯಾಣ ಮಾಡಬಹುದು. ಮನೆಯಲ್ಲಿ ಶುಭ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ದೊರೆಯಬಹುದು.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಮಿಶ್ರಫಲವಿದೆ. ಕಚೇರಿಯಲ್ಲಿ ಹೊಸ ಯೋಜನೆ ಮೇಲೆ ಕೆಲಸ ಆರಂಭಿಸಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಮಿಥುನ ರಾಶಿ

ನಕಾರಾತ್ಮಕ ವಿಚಾರಗಳನ್ನು ಮನಸ್ಸಿನಿಂದ ದೂರಮಾಡಿ. ಊಟ-ತಿಂಡಿ ಬಗ್ಗೆ ಗಮನವಿರಲಿ. ವಿನಾಕಾರಣ ಹಣ ಖರ್ಚಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಕಾರ್ಯಗಳನ್ನೂ ಪೂರ್ಣಗೊಳಿಸುವ ಅವಕಾಶ ಸಿಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶದಿಂದ ಶುಭ ಸಮಾಚಾರ ದೊರೆಯಲಿದೆ.

ಸಿಂಹ ರಾಶಿ

ವ್ಯಾಪಾರ ವೃದ್ಧಿಗೆ ಹೊಸ ಯೋಜನೆ ಹಮ್ಮಿಕೊಳ್ಳಲು ಸಮಯ ಅನುಕೂಲಕರವಾಗಿದೆ. ಒಳ್ಳೆಯ ಕೆಲಸಕ್ಕಾಗಿ ಹಣ ಖರ್ಚಾಗಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಕನ್ಯಾ ರಾಶಿ

ಇಂದು ಮಿಶ್ರಫಲವಿದೆ. ಕುಟುಂಬದಲ್ಲಿ ಅಥವಾ ಕಚೇರಿಯಲ್ಲಿ ಯಾರೊಂದಿಗಾದರೂ ವಾದ-ವಿವಾದ ಉಂಟಾಗಬಹುದು. ಸಂಜೆಯವರೆಗೂ ಸಾಮಾನ್ಯ ಸ್ಥಿತಿ ಇರುತ್ತದೆ.

ತುಲಾ ರಾಶಿ

ಇಂದು ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ವಸ್ತ್ರಾಭರಣ ಖರೀದಿ ಜೊತೆಗೆ ಕಲೆಯ ಜೊತೆಗೂ ಅಭಿರುಚಿ ಬೆಳೆಯಲಿದೆ. ವ್ಯಾಪಾರಕ್ಕೆ ಇಂದು ಶುಭ ಸಮಯ.

ವೃಶ್ಚಿಕ ರಾಶಿ

ಇಂದು ಆಸ್ತಿಗೆ ಸಂಬಂಧಪಟ್ಟ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸಹೋದರರು, ಸಂಬಂಧಿಕರ ಸಂಪೂರ್ಣ ಸಹಕಾರ ಸಿಗಲಿದೆ. ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸುತ್ತೀರಿ.

ಧನು ರಾಶಿ

ಆತ್ಮೀಯರ ಮಾತಿನಿಂದ ಮನಸ್ಸಿಗೆ ದುಖಃವಾಗಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭ ಕೂಡ ದೊರೆಯುವ ಸಾಧ್ಯತೆ ಇದೆ.

ಮಕರ ರಾಶಿ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳೆಡೆಗೆ ಹೆಚ್ಚು ಆಸಕ್ತಿ ಮೂಡಲಿದೆ. ವ್ಯಾಪಾರದಲ್ಲೂ ಅನುಕೂಲಕರ ವಾತಾವರಣವಿರುತ್ತದೆ. ಎಲ್ಲಾ ಕೆಲಸಗಳೂ ಸರಳವಾಗಿ ಪೂರ್ಣಗೊಳ್ಳಲಿವೆ.

ಕುಂಭ ರಾಶಿ

ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಆತ್ಮೀಯರೊಂದಿಗಿನ ವಾದ-ವಿವಾದದಿಂದ ಮನಸ್ಸು ಅಶಾಂತಗೊಳ್ಳುತ್ತದೆ. ಮಧ್ಯಾಹ್ನದ ನಂತರ ಎಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳುತ್ತವೆ.

ಮೀನ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಶುಭ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ಮಧ್ಯಾಹ್ನದ ನಂತರ ಕೊಂಚ ಸಮಾಧಾನದಿಂದಿರಿ.

For Latest News Updates, Join Our Whatsapp Community🚩
RELATED ARTICLES

Most Popular