alex Certify ಚಳಿಗಾಲದ ಶುಷ್ಕ ಚರ್ಮದಿಂದ ಬೇಸತ್ತಿರುವಿರಾ…..? ಹೊಳಪು ಪಡೆಯಲು ಈ ಫೇಸ್​ಪ್ಯಾಕ್​ ಟ್ರೈ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ಶುಷ್ಕ ಚರ್ಮದಿಂದ ಬೇಸತ್ತಿರುವಿರಾ…..? ಹೊಳಪು ಪಡೆಯಲು ಈ ಫೇಸ್​ಪ್ಯಾಕ್​ ಟ್ರೈ ಮಾಡಿ

ಚಳಿಗಾಲದಲ್ಲಿ ಬಹುತೇಕ ಪ್ರತಿಯೊಬ್ಬರ ಚರ್ಮವು ಒಣಗುತ್ತದೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತದೆ. ಚಳಿಗಾಲದ ಹವಾಮಾನದಿಂದ ಚರ್ಮ ನಿರ್ಜಲೀಕರಣಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್​ಗಳ ಮೊರೆ ಹೋಗುವ ಬದಲು ಇಲ್ಲೊಂದು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಫೇಸ್​​ಪ್ಯಾಸ್​ ಬಗ್ಗೆ ತಿಳಿಸಲಾಗಿದೆ.

ಇದು ಕುಂಬಳಕಾಯಿಯ ಫೇಸ್​ಪ್ಯಾಕ್​. ವರ್ಷಪೂರ್ತಿ ಮಾಡಬಹುದಾದರೂ, ಚಳಿಗಾಲದಲ್ಲಿ ಇದನ್ನು ಮಾಡಿದರೆ ಚರ್ಮ ಹೊಳಪು ಪಡೆದುಕೊಳ್ಳುತ್ತದೆ. ವಿಟಮಿನ್ ಎ, ಸಿ ಮತ್ತು ಇ, ಆಂಟಿಆಕ್ಸಿಡೆಂಟ್‌ಗಳು, ಸತು, ಪೊಟ್ಯಾಸಿಯಮ್ ಮತ್ತು ಹಣ್ಣಿನ ಕಿಣ್ವಗಳಲ್ಲಿ ಹೇರಳವಾಗಿರುವ ಕಾರಣ ಇದು ನೈಸರ್ಗಿಕ ಚರ್ಮಕ್ಕೆ ಸೂಪರ್‌ಹೀರೋ ಆಗಿದೆ.

ಬೇಕಾಗಿರುವ ಸಾಮಗ್ರಿಗಳು:

ಕುಂಬಳಕಾಯಿಯ 1 ಸಣ್ಣ ಸ್ಲೈಸ್ (ಸುಮಾರು ½ ಕಪ್)

1 ಹಸಿ ಮೊಟ್ಟೆ

½ ಟೀ ಚಮಚ ಜೇನುತುಪ್ಪ

½ ಟೀ ಚಮಚ ಆಪಲ್ ಸೈಡರ್ ವಿನೆಗರ್

ಕುಂಬಳಕಾಯಿಯ ತಿರುಳನ್ನು ತೆಗೆದು ಅದನ್ನು ಸ್ಮೂತ್​ ಮಾಡಿಕೊಳ್ಳಿ. ಇದಕ್ಕೆ ಮೊಟ್ಟೆ, ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ನೊಂದಿಗೆ ಮಿಶ್ರಣ ಮಾಡಿ. ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಫೇಸ್​ಪ್ಯಾಕ್​ ಮಾಡಿಕೊಳ್ಳಿ.

ಸುಮಾರು 15-20 ನಿಮಿಷಗಳ ಕಾಲ ಚರ್ಮದ ಮೇಲೆ ಇದು ಇರಲಿ. ನಂತರ ಮುಖವನ್ನು ತೊಳೆಯಿರಿ.

ಕುಂಬಳಕಾಯಿಯ ಪ್ರಯೋಜನಗಳು:

ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳ ಪರಿಣಾಮವಾಗಿ ಉಂಟಾಗುವ ಕಪ್ಪು ಕಲೆಗಳನ್ನು ನಿರ್ಮೂಲನ ಮಾಡುತ್ತದೆ. ಮೊಡವೆಗಳನ್ನು ದೂರವಿಡಲು ಕೂಡ ಇದು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...