ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಆಗುವಷ್ಟು ಕಿರಿಕಿರಿ ಮುಜುಗರ ಇನ್ನೊಂದಿಲ್ಲ. ಎಲ್ಲೆ ಇದ್ದರೂ ಕೈ ತಲೆಯತ್ತ ಹೋಗುತ್ತದೆ. ಹೇನಿನ ಸಮಸ್ಯೆಯಿಂದ ತಲೆಯಲ್ಲಿ ತುರಿಕೆ, ಗಾಯಗಳೂ ಕೂಡ ಆಗುತ್ತದೆ.
ಇವನ್ನು ಶಾಶ್ವತವಾಗಿ ಕಡಿಮೆ ಮಾಡಿಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್ .
* ಆಲಿವ್ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ಈ ಹೇನಿನ ಸಮಸ್ಯೆ ಕಡಿಮೆಯಾಗುತ್ತದೆ. ರಾತ್ರಿ ಎಣ್ಣೆ ಹಚ್ಚಿಕೊಂಡು ಬಿಡಿ. ಬೆಳಿಗ್ಗೆ ಮೈಲ್ಡ್ ಶಾಂಪೂ ಬಳಸಿ ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಿದರೆ ಪರಿಣಾಮಕಾರಿ.
* ಹೇನಿನ ಶಾಂಪೂ, ಎಣ್ಣೆಯಿಂದ ಅಲರ್ಜಿಯಾಗುವವರು ಪೆಟ್ರೋಲಿಯಂ ಜೆಲ್ಲಿಯನ್ನು ತಲೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಸ್ನಾನ ಮಾಡಿದರೆ ಹೇನುಗಳು ಇಲ್ಲವಾಗುತ್ತದೆ.
* ಹತ್ತು ತುಳಸಿ ಎಲೆ ಹಾಗೂ ಹತ್ತು ಬೇವಿನ ಎಲೆ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಂಡು. ಇದಕ್ಕೆ ಸ್ವಲ್ಪ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಪ್ಯಾಕ್ ರೀತಿ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿದರೆ ಹೇನುಗಳು ನಿವಾರಣೆಯಾಗುತ್ತದೆ.
* ¼ ಕಪ್ ಉಪ್ಪು, ¼ ಕಪ್ ವಿನೇಗರ್ ತೆಗೆದುಕೊಳ್ಳಿ. ಇವೆರಡನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ನಿಮ್ಮ ತಲೆಗೆ ಇದನ್ನು ಸ್ಪ್ರೇ ಮಾಡಿಕೊಳ್ಳಿ. ಮುಖ ಹಾಗೂ ಕಣ್ಣಿನ ಬಗ್ಗೆ ಹುಷಾರು. ನಂತರ ತಲೆಗೆ ಒಂದು ಶವರ್ ಕ್ಯಾಪ್ ಹಾಕಿಕೊಳ್ಳಿ. ಎರಡು ಗಂಟೆ ಬಿಟ್ಟು ತಲೆಸ್ನಾನ ಮಾಡಿದರೆ ಹೇನು ಕಡಿಮೆಯಾಗುತ್ತದೆ.