ಮೊಬೈಲ್ ಮೂಲಭೂತ ಅಗತ್ಯಗಳಲ್ಲೊಂದಾಗಿದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಮೊಬೈಲ್ ಬೇಕು. ಹಾಗೆ ರಾತ್ರಿ ಕಣ್ಣು ಮುಚ್ಚುವವರೆಗೂ ಮೊಬೈಲ್ ನೋಡ್ತಾರೆ. ರಾತ್ರಿ ಹಾಸಿಗೆ ಮೇಲೆ ಮೊಬೈಲ್ ಬಳಕೆ ಮಾಡುವುದು ಬಹಳ ಅಪಾಯಕಾರಿ. ಸ್ನೇಹಿತರ ಸಂದೇಶ ನೋಡಲು ಅಥವಾ ಅವರಿಗೆ ಕರೆ ಮಾಡಲು ಮೊಬೈಲ್ ಹಿಡಿದವರು 2-3 ಗಂಟೆಯವರೆಗೆ ಮೊಬೈಲ್ ನೋಡ್ತಾರೆ.
ಸಾಮಾನ್ಯ ಮನುಷ್ಯನಿಗೆ 6-8 ಗಂಟೆ ನಿದ್ರೆ ಅವಶ್ಯವಾಗಿ ಬೇಕು. ಆದ್ರೆ ತಡರಾತ್ರಿಯವರೆಗೂ ಮೊಬೈಲ್ ನೋಡುತ್ತಿರುವ ಮಂದಿ ಕಡಿಮೆ ನಿದ್ರೆ ಮಾಡ್ತಾರೆ. ಇದ್ರಿಂದ ನಿದ್ರೆ ಕಡಿಮೆಯಾಗಿ ನೆನಪಿನ ಶಕ್ತಿ ದುರ್ಬಲವಾಗುತ್ತದೆ.
ನಿದ್ರಾಹೀನತೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗೆ ಇಡೀ ದಿನವನ್ನು ಹಾಳು ಮಾಡುತ್ತದೆ. ಕಿರಿಕಿರಿ, ಸುಸ್ತು, ಒತ್ತಡ ಕಾಡುತ್ತದೆ.
ನಿದ್ರೆ ಕಡಿಮೆಯಾದ್ರೆ ದೇಹದಲ್ಲಿರುವ ಮೆಲಟೋನಿನ್ ಪ್ರಮಾಣ ಜಾಸ್ತಿಯಾಗುತ್ತದೆ. ಇದು ಖಿನ್ನತೆಗೆ ಕಾರಣವಾಗುತ್ತದೆ.
ನಿದ್ರಾಹೀನತೆ ತೂಕ ಏರಲು ಕಾರಣವಾಗುತ್ತದೆ. ಕಡಿಮೆ ನಿದ್ರೆಯಿಂದ ಹಾರ್ಮೋನ್ ನಲ್ಲಿ ಏರುಪೇರಾಗಿ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.
ಮೊಬೈಲ್ ಬಳಕೆ ನಿದ್ರೆ ಹಾಳುಮಾಡುತ್ತದೆ. ಕಡಿಮೆ ನಿದ್ರೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ರಾತ್ರಿ ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಸ್ವಿಚ್ ಆಪ್ ಮಾಡಿ. ಸುಖವಾಗಿ ನಿದ್ರೆ ಮಾಡಿ.