HomeBeautyʼಸೀಗೆಕಾಯಿʼ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್

ʼಸೀಗೆಕಾಯಿʼ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್

ಕೂದಲಿಗೆ ಹರ್ಬಲ್​ ಕೇರ್​ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿವೆ.

ಅದರಲ್ಲೂ ಆ್ಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್ಸ್​ ಗಳನ್ನು ಹೊಂದಿರುವ ಸೀಗೆಕಾಯಿ ಬಳಕೆಯಿಂದ ಕೂದಲು ಸದೃಢಗೊಳ್ಳುವುದರ ಜೊತೆಗೆ ಹೊಳಪಿನಿಂದ ಕೂಡಿರುತ್ತದೆ. ಸೀಗೆಕಾಯಿಯನ್ನು ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ನೋಡಿ.

ಸೀಗೆಕಾಯಿ ಮತ್ತು ಆಮ್ಲಾ ಪೌಡರ್​ : ಕೂದಲು ತುಂಡಾಗುವುದು ಮತ್ತು ಸೀಳು ಒಡೆಯುವ ಸಮಸ್ಯೆಗೆ ಸೀಗೆಕಾಯಿ ಮತ್ತು ಆಮ್ಲ ಉತ್ತಮ ಪರಿಹಾರ. ಈ ಮಿಶ್ರಣಕ್ಕೆ ಸ್ವಲ್ಪ ಬೆಚ್ಚಗಿನ ನೀರು ಸೇರಿಸಿ ಪೇಸ್ಟ್​ ತಯಾರಿಸಿ ಕೂದಲಿಗೆ ಹಚ್ಚಿ. 30 ನಿಮಿಷದ ನಂತರ ತಂಪಾದ ನೀರಿನಿಂದ ಕೂದಲನ್ನು ತೊಳೆಯಿರಿ. ಎರಡು ದಿನಕ್ಕೊಮ್ಮೆ ಈ ರೀತಿ ಮಾಡುವುದರಿಂದ ಕೂದಲು ಆರೋಗ್ಯವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೀಗೆಕಾಯಿ ಮತ್ತು ಮೊಸರು : ಕೂದಲಿಗೆ ಮೊಸರಿನ ಬಳಕೆ ಉತ್ತಮ ವಿಧಾನ. ಡ್ಯಾಂಡ್ರಫ್​ ಹಾಗೂ ಒರಟಾದ ಕೂದಲಿನ ಸಮಸ್ಯೆಗೆ ಮೊಸರಿನ ಬಳಕೆ ಉತ್ತಮ ಪರಿಹಾರ. ಒಂದು ಚಮಚ ಮೆಂತ್ಯೆ ಪುಡಿ, ಒಂದು ಚಮಚ ಸೀಗೆಕಾಯಿ ಪುಡಿ, ಒಂದು ಚಮಚ ಆಮ್ಲಾ ಪುಡಿ, ಒಂದು ಕಪ್​ ಮೊಸರು ಸೇರಿಸಿ 2-3 ತಾಸು ಹಾಗೆ ಬಿಡಿ. ಇದನ್ನು ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

ಸೀಗೆಕಾಯಿ ಮತ್ತು ತೆಂಗಿನ ಎಣ್ಣೆ : ಸೀಗೆಕಾಯಿ ಪುಡಿಗೆ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ಸೇರಿಸಿ ಕೂದಲು ಮತ್ತು ಸ್ಕಾಲ್ಪ್ ​ಗೆ ಹಚ್ಚಿ, 10 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಡ್ರೈ ಹೇರ್​ ಸಮಸ್ಯೆ ದೂರವಾಗುತ್ತದೆ.

ಸೀಗೆಕಾಯಿ ಮತ್ತು ನೆಲ್ಲಿಕಾಯಿ : ಸ್ವಲ್ಪ ಸೀಗೆಕಾಯಿ ಪುಡಿಗೆ, ನೆಲ್ಲಿಕಾಯಿ ಪುಡಿ, ಅಕ್ಕಿ ಹಿಟ್ಟು ಹಾಗೆ ಎಗ್​ ವೈಟ್​ ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಒಂದು ತಾಸು ಆರಲು ಬಿಡಿ. ನಂತರ ಶ್ಯಾಂಪು ಜೊತೆ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ನೈಸರ್ಗಿಕವಾಗಿಯೇ ನೇರವಾಗುತ್ತದೆ ಮತ್ತು ಉತ್ತಮ ಕಾಂತಿ ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular