HomeAstroಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಉತ್ತಮ ಅವಕಾಶ

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಉತ್ತಮ ಅವಕಾಶ

ಮೇಷ ರಾಶಿ 

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭದಿನ. ಕುಟುಂಬಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಒಡಹುಟ್ಟಿದವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಆರ್ಥಿಕ ವೃದ್ಧಿಯಾಗಲಿದೆ. ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸಮಾಚಾರ ದೊರೆಯಬಹುದು. ಬಾಲ್ಯದ ಅಥವಾ ಹಳೆ ಸ್ನೇಹಿತರ ಭೇಟಿಯಾಗಲಿದೆ. ಉದ್ಯಮದಲ್ಲಿ ಆರ್ಥಿಕ ಲಾಭವಾಗಲಿದೆ.

ಮಿಥುನ ರಾಶಿ

ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಮನರಂಜನೆ ಕೂಡ ದೊರೆಯಲಿದೆ. ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಅಧಿಕವಾಗಿದೆ. ಪಾಲುದಾರಿಕೆಯಲ್ಲೂ ಲಾಭವಿದೆ. ಸಮಾಜದಲ್ಲೂ ಗೌರವ ಸಿಗಲಿದೆ.

ಕರ್ಕ ರಾಶಿ

ವಿದೇಶಕ್ಕೆ ತೆರಳಲು ಉತ್ಸುಕರಾಗಿರುವವರಿಗೆ ಉತ್ತಮ ಅವಕಾಶವಿದೆ. ಧಾರ್ಮಿಕ ಯಾತ್ರೆಯಿಂದ ಮನಸ್ಸು ಉಲ್ಲಾಸಗೊಳ್ಳಲಿದೆ. ಉದ್ಯಮ ಮತ್ತು ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

ಕುಟುಂಬದವರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಗೆ ಹೊಸ ಬಗೆಯ ಅಲಂಕಾರ ಮಾಡಲು ಚಿಂತನೆ ನಡೆಸಿದ್ದೀರಿ. ಕೆಲಸಗಳಲ್ಲಿ ಸಂತೃಪ್ತಿ ದೊರೆಯಲಿದೆ. ಸ್ತ್ರೀಯರಿಂದ ಹೆಚ್ಚಿನ ಗೌರವ ಸಿಗಲಿದೆ.

ಕನ್ಯಾ ರಾಶಿ

ಸುಖ-ಶಾಂತಿಯಿಂದ ಇವತ್ತಿನ ದಿನ ಕಳೆಯಲಿದೆ. ಉದ್ಯಮಿಗಳಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸುಸಮಯ. ಪತಿ-ಪತ್ನಿಯ ಮಧ್ಯೆ ದಾಂಪತ್ಯ ಜೀವನದಲ್ಲಿ ನಿಕಟತೆ ಹೆಚ್ಚಾಗಲಿದೆ. ಮಿತ್ರರು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ.

ತುಲಾ ರಾಶಿ

ನಕಾರಾತ್ಮಕ ಯೋಚನೆಯಿಂದ ಮನಸ್ಸು ಹತಾಶವಾಗುತ್ತದೆ. ಮಾನಸಿಕ ಉದ್ವೇಗ ಮತ್ತು ಕೋಪ ಸಹ ಹೆಚ್ಚಾಗಲಿದೆ. ಖರ್ಚು ಹೆಚ್ಚಾಗುವ ಸಾಧ್ಯೆ ಇದೆ. ಮಾತಿನ ಮೇಲೆ ಹಿಡಿತವಿರಲಿ. ಮನೆಯಲ್ಲಿ ಜಗಳವಾಗದಂತೆ ಎಚ್ಚರ ವಹಿಸಿ.

ವೃಶ್ಚಿಕ ರಾಶಿ

ಆರ್ಥಿಕ ಯೋಜನೆ ಮತ್ತು ವ್ಯಾಪಾರ ವಿಸ್ತರಣೆಗೆ ಶುಭದಿನ. ಅಂದುಕೊಂಡ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಪರೋಪಕಾರದ ಭಾವನೆ ಮೂಡಲಿದೆ. ಮನರಂಜನೆಯಲ್ಲಿ ಕಾಲ ಕಳೆಯಲಿದ್ದೀರಿ. ನೌಕರಿ ಹಾಗೂ ಉದ್ಯಮದಲ್ಲಿ ಪದೋನ್ನತಿಯ ಯೋಗವಿದೆ.

ಧನು ರಾಶಿ

ವೈಚಾರಿಕ ಸಮೃದ್ಧಿ ಮತ್ತು ಮೃದು ಮಾತುಗಳಿಂದ ಲಾಭವಾಗುತ್ತದೆ. ಸೌಹಾರ್ದಪೂರ್ಣ ಸಂಬಂಧದ ಮೂಲಕ ನಿಮ್ಮ ಕೆಲಸಗಳನ್ನು ಸುಗಮವಾಗಿಸಿಕೊಳ್ಳುತ್ತೀರಿ. ಉದ್ಯಮದಲ್ಲೂ ಇಂದು ಲಾಭದಾಯಕವಾದ ದಿನ. ಆರೋಗ್ಯ ಉತ್ತಮವಾಗಿರುತ್ತದೆ.

ಮಕರ ರಾಶಿ

ಆರ್ಥಿಕ ಮತ್ತು ವ್ಯವಹಾರಿಕವಾಗಿ ಇವತ್ತು ಲಾಭದಾಯಕ ದಿನ. ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ದೀರ್ಘಾವಧಿಗೆ ಆರ್ಥಿಕ ಯೋಜನೆ ರೂಪಿಸಲಿದ್ದೀರಿ. ಶರೀರ ಮತ್ತು ಮನಸ್ಸು ಉಲ್ಲಸಿತವಾಗಿರಲಿದೆ.

ಕುಂಭ ರಾಶಿ

ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತದೆ. ತಾಯಿ ಮತ್ತು ಸ್ತ್ರೀಯರ ವಿಚಾರದಲ್ಲಿ ಹೆಚ್ಚು ಸಂವೇದನಶೀಲರಾಗಿರುತ್ತೀರಿ. ಮಾನಸಿಕವಾಗಿ ಆಯಾಸ ಕಾಡಬಹುದು. ನಿದ್ದೆಯ ಕೊರತೆಯಿಂದ ಆಲಸ್ಯ ಉಂಟಾಗುತ್ತದೆ.

ಮೀನ ರಾಶಿ

ದೂರದಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗಿನ ಸಂದೇಶ ವ್ಯವಹಾರದಿಂದ ಲಾಭವಾಗಲಿದೆ. ಕುಟುಂಬದಲ್ಲಿ ಸುಖ ಶಾಂತಿ ನೆಲೆಸಲಿದೆ. ಒಳ್ಳೆ ಭೋಜನ ಸಿಗಲಿದೆ. ನಿರ್ಧಾರಿತ ಕೆಲಸದಲ್ಲಿ ಜಯ ಸಿಗಲಿದೆ. ಸ್ತ್ರೀ ಮಿತ್ರರ ಸಹಕಾರ ದೊರೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular