HomeAstroಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ

ಇವತ್ತು ಪರೋಪಕಾರ ಮತ್ತು ಸದ್ಭಾವನೆಯಲ್ಲಿ ದಿನ ಕಳೆಯಲಿದೆ. ಸೇವೆ ಮತ್ತು ಪುಣ್ಯದ ಕೆಲಸಗಳನ್ನು ಮಾಡಲಿದ್ದೀರಿ. ಮಾನಸಿಕವಾಗಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾದ-ವಿವಾದಗಳಲ್ಲಿ ಇಂದು ನಿಮಗೆ ಗೆಲುವು ಸಿಗುತ್ತದೆ. ನಿಮ್ಮ ಮಧುರ ಧ್ವನಿಯಿಂದ ಮೋಡಿ ಮಾಡಲಿದ್ದೀರಿ. ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆಯೂ ಇದೆ.

ಮಿಥುನ ರಾಶಿ

ಅತಿಯಾದ ಭಾವುಕತೆ ಮತ್ತು ಸಂವೇದನಾಶೀಲತೆಗೆ ಒಳಗಾಗಬೇಡಿ. ನೀರಿನಿಂದ ತೊಂದರೆ ಆಗಬಹುದು. ಹಾಗಾಗಿ ನದಿ, ಸಮುದ್ರ ಅಥವಾ ಜಲಪಾತಗಳಿಂದ ದೂರವಿರಿ. ಮನಸ್ಸು ಗೊಂದಲಮಯವಾಗಿರುತ್ತದೆ.

ಕರ್ಕ ರಾಶಿ

ಇಂದು ಉತ್ಸಾಹದಿಂದ ದಿನ ಕಳೆಯುತ್ತೀರಿ. ಹೊಸ ಕಾರ್ಯ ಪ್ರಾರಂಭಿಸಬಹುದು. ಮಿತ್ರರು ಮತ್ತು ಸಂಬಂಧಿಕರ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ಸಿಂಹ ರಾಶಿ

ಇವತ್ತು ನಿಮಗೆ ಮಿಶ್ರಫಲಗಳಿವೆ. ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಅವರಿಂದ ಸಹಕಾರ ಕೂಡ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಭವವಾಗಬಹುದು.

ಕನ್ಯಾ ರಾಶಿ

ನಿಮ್ಮ ವಾಕ್ ಚಾತುರ್ಯದಿಂದ ಮಧುರ ಸಂಬಂಧಗಳು ಸೃಷ್ಟಿಯಾಗಬಹುದು. ಅದು ಭವಿಷ್ಯದಲ್ಲೂ ನಿಮಗೆ ಲಾಭದಾಯಕವಾಗಿರುತ್ತದೆ. ಕೋಪವನ್ನು ಕಡಿಮೆ ಮಾಡಿಕೊಂಡರೆ ಮಾತ್ರ ಅನಿಷ್ಠಗಳಿಂದ ಪಾರಾಗಲು ಸಾಧ್ಯ.

ತುಲಾ ರಾಶಿ

ಇವತ್ತಿನ ದಿನ ಪ್ರತಿಕೂಲವಾಗಿದೆ. ಸಮಾಧಾನದಿಂದ ಇರುವುದು ಒಳಿತು. ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಅವರೊಂದಿಗೆ ಸುತ್ತಾಡಲು ತೆರಳುವ ಸಾಧ್ಯತೆ ಇದೆ. ಮೋಜು-ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ.

ಧನು ರಾಶಿ

ಇವತ್ತು ನಿಮಗೆ ಶುಭ ದಿನ. ಉತ್ತಮ ಆರ್ಥಿಕ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತೀರಿ. ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೀರಿ.

ಮಕರ ರಾಶಿ

ಇಂದು ನಿಮಗೆ ಮಧ್ಯಮ ಫಲವಿದೆ. ಬೌದ್ಧಿಕ ಕಾರ್ಯಗಳನ್ನು ಕೈಗೊಳ್ಳಬಹುದು. ಅದರಲ್ಲಿ ನಿರೀಕ್ಷಿತ ಯಶಸ್ಸು ಸಿಗುತ್ತದೆ. ವ್ಯವಹಾರಗಳಲ್ಲಿ ಎಚ್ಚರ ವಹಿಸಿ.

ಕುಂಭ ರಾಶಿ

ಇಂದು ಆಧ್ಯಾತ್ಮಿಕ ವಿಚಾರಗಳಿಂದಾಗಿ ಮನಸ್ಸಿಗೆ ಆಯಾಸದ ಅನುಭವವಾಗಲಿದೆ. ಕೋಪದ ಭಾವನೆ ಹೆಚ್ಚಾಗಿರುತ್ತದೆ. ವೈಚಾರಿಕ ಸಮೃದ್ಧಿ ಹೆಚ್ಚಾಗಲಿದೆ.

ಮೀನ ರಾಶಿ

ನಿಮ್ಮಲ್ಲಿ ಅಡಗಿರುವ ಲೇಖಕ ಮತ್ತು ಕಲಾವಿದನನ್ನು ಹೊರತರುವ ಅವಕಾಶ ಸಿಗಲಿದೆ. ವ್ಯಾಪಾರದಲ್ಲಿ ಪಾಲುದಾರಿಕೆ ಮಾಡಿಕೊಳ್ಳಲು ಸಮಯ ಅನುಕೂಲಕರವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular