HomeAstroಈ ರಾಶಿಯವರಿಗಿದೆ ಇಂದು ಖರೀದಿಯಲ್ಲಿ ಲಾಭವಾಗುವ ಸಂಭವ

ಈ ರಾಶಿಯವರಿಗಿದೆ ಇಂದು ಖರೀದಿಯಲ್ಲಿ ಲಾಭವಾಗುವ ಸಂಭವ

ಮೇಷ ರಾಶಿ  

ಇಂದು ಧನಲಾಭವಾಗುವ ಸಾಧ್ಯತೆಯಿದೆ. ಸಂಬಳ ಕೂಡ ಏರಿಕೆಯಾಗಬಹುದು. ಹೊಸ ಸಂಬಂಧಕ್ಕೆ ನಾಂದಿಯಾಗಲಿದ್ದು, ಅದರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆಯಾಗಬಹುದು. ಲೋಹದಿಂದ ನಿಮಗೆ ಇಂದು ಲಾಭವಾಗಲಿದೆ. ಹಣಕಾಸು ವಿಚಾರದಲ್ಲಿ ಚಿಂತಿತರಾಗುತ್ತೀರಿ. ಕಚೇರಿಯಲ್ಲಿ ಕೆಲಸವೂ ಅಧಿಕವಾಗಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದಿರಿ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ್ಮೀಯರು ನಿಮಗೆ ಸಲಹೆ ನೀಡುವ ಜೊತೆಗೆ ಸಹಾಯ ಮಾಡಲಿದ್ದಾರೆ. ನೀವು ಅಂದುಕೊಂಡ ಕೆಲಸ ಕೈಗೂಡಲಿದೆ. ಸಮಾಧಾನವಾಗಿ ಕೆಲಸ ಮಾಡಿ. ಉದ್ಯೋಗದಲ್ಲಿ ಜವಾಬ್ಧಾರಿ ಹೆಚ್ಚುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತಿತರಾಗುತ್ತೀರಿ.

ಮಿಥುನ ರಾಶಿ

ನಿಮ್ಮ ಜವಾಬ್ಧಾರಿಯ ಬಗ್ಗೆ ಗಮನವಿರಲಿ. ಕಠಿಣ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗಿ ಬರಬಹುದು. ಸ್ನೇಹಿತರು, ಆತ್ಮೀಯರು ನಿಮಗೆ ನೆರವಾಗಲು ಮುಂದೆ ಬರುತ್ತಾರೆ. ರಾಜಕೀಯ ವ್ಯಕ್ತಿಗಳಿಗೂ ಇಂದು ಶುಭದಿನ. ಊಟ-ತಿಂಡಿಯನ್ನು ಸ್ವಲ್ಪ ನಿಯಂತ್ರಣದಲ್ಲಿಡಿ.

ಕರ್ಕ ರಾಶಿ

ಇಂದು ಅತ್ಯಂತ ಲಾಭದಾಯಕ ದಿನ. ಬೇರೆಯವರೊಂದಿಗೆ ವ್ಯವಹಾರ ಮಾಡುವಾಗ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಜೊತೆಗೆ ಕೆಲಸ ಮಾಡುವವರೇ ನಿಮ್ಮ ಪಾಲಿಗೆ ಇವತ್ತು ಲಾಭದಾಯಕವಾಗಲಿದ್ದಾರೆ. ಸಮಾಧಾನ ಚಿತ್ತದಿಂದ ಮಾತನಾಡಿದರೆ ಜನರು ನಿಮ್ಮನ್ನು ಹೊಗಳುತ್ತಾರೆ. ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳುವುದು ಬೇಡ.

ಸಿಂಹ ರಾಶಿ

ನಿಮಗೆ ಸಹೋದರರು ಮತ್ತು ಸ್ನೇಹಿತರ ಸಂಬಂಧದಲ್ಲಿ ತೊಡಕಾಗಬಹುದು. ನಿಮ್ಮ ದೊಡ್ಡ ಕನಸು ಕೂಡ ನನಸಾಗುತ್ತದೆ. ಖರೀದಿಯಲ್ಲಿ ಇವತ್ತು ಲಾಭವಾಗುವ ಸಂಭವ ಇದೆ. ಇವತ್ತು ನೀವು ಸ್ವಲ್ಪ ಅರೆಮನಸ್ಕರಾಗಿರುತ್ತೀರಿ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಪ್ರೇಮ ಸಂಬಂಧ ಕೂಡ ಆರಂಭವಾಗುವ ಸಂಭವವಿದೆ. ಖರ್ಚನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ಮಾಡುತ್ತೀರಾ. ಕುಟುಂಬದ ಕೆಲವರ ಮಾತು ನಿಮಗೆ ಇಷ್ಟವಾಗದೇ ಇರಬಹುದು. ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗುತ್ತೀರಿ. ಅದರಲ್ಲಿ ಸಫಲತೆ ಕೂಡ ಸಿಗುತ್ತದೆ. ಸ್ನೇಹಿತರು, ನೆರೆಹೊರೆಯವರು, ಸಂಬಂಧಿಕರು ನಿಮಗೆ ಸಹಾಯ ಮಾಡುತ್ತಾರೆ.

ತುಲಾ ರಾಶಿ

ಒತ್ತಡ ಮತ್ತು ಆತಂಕಗಳು ದೂರವಾಗಲಿವೆ. ಇವತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಹಣಕಾಸಿಗೆ ಸಂಬಂಧಿಸಿದ ತೊಡಕು ನಿವಾರಿಸಲು ಪ್ರಯತ್ನಿಸುತ್ತೀರಾ. ಸಾಲ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಹೊಸ ಮತ್ತು ಹಳೆ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆದ್ರೆ ದಿಢೀರನೆ ನಿಮ್ಮ ಮೂಡ್ ಬದಲಾಗಬಹುದು.

ವೃಶ್ಚಿಕ ರಾಶಿ

ಒಂದೇ ಬಾರಿ ಹಲವು ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತೀರಾ. ನಿಮ್ಮ ಪಾಲಿಗೆ ಸಾಮಾನ್ಯ ದಿನ. ಸಾವಧಾನ ಚಿತ್ತದಿಂದ ಇರುತ್ತೀರಾ. ಪ್ರೀತಿ ಮತ್ತು ರೊಮ್ಯಾನ್ಸ್ ಗೆ ಇದು ಸೂಕ್ತವಾದ ದಿನ. ಬ್ಯುಸಿನೆಸ್ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಕೋಪದ ಕೈಗೆ ಬುದ್ಧಿ ಕೊಟ್ರೆ ಹಣ ಕಳೆದುಕೊಳ್ಳುವ ಸಂಭವವೂ ಇದೆ.

ಧನು ರಾಶಿ

ಮನಸ್ಸು ಬಿಚ್ಚಿ ಕೆಲಸ ಮಾಡಿದ್ರೆ ಲಾಭ ನಿಶ್ಚಿತ. ಮನೆ ಮತ್ತು ಅಂಗಡಿಯಲ್ಲಿ ಧನಲಾಭವಿದೆ. ಕಾಲ್ಪನಿಕತೆಯಿಂದ ದೂರವಾಗಿ ಗಂಭೀರ ಮತ್ತು ವಾಸ್ತವಿಕ ಮೂಡ್ ನಲ್ಲಿರುತ್ತೀರಾ. ಕೆಲಸದ ಕಡೆಗೆ ಹೆಚ್ಚು ಗಮನಹರಿಸುತ್ತೀರಾ. ಅವಕಾಶ ಸಿಕ್ಕಿದರೆ ಒಂಟಿಯಾಗಿ ಕುಳಿತು ಸ್ವಲ್ಪ ಚಿಂಥನ-ಮಂಥನ ನಡೆಸಿ. ಕೌಟುಂಬಿಕ ಸಮಸ್ಯೆ ಎದುರಾಗಬಹುದು.

ಮಕರ ರಾಶಿ

ಸ್ನೇಹಿತರು ಮತ್ತು ಇತರ ವ್ಯವಹಾರಗಳಲ್ಲಿ ಬ್ಯುಸಿಯಾಗಿರುತ್ತೀರಾ. ಈ ಭೇಟಿಯಿಂದ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಬದುಕೇ ಬದಲಾಗುವಂತಹ ಅವಕಾಶವೊಂದು ಸದ್ಯದಲ್ಲೇ ದೊರೆಯಲಿದೆ. ಆರೋಗ್ಯವೂ ಸುಧಾರಿಸಲಿದೆ. ಖರ್ಚು ಹೆಚ್ಚಾಗಲಿದೆ, ಕಳ್ಳತನದ ಅಪಾಯವೂ ಇದ್ದು ಎಚ್ಚರಿಕೆಯಿಂದಿರಿ.

ಕುಂಭ ರಾಶಿ

ಹೊಸ ಕಾರ್ಯಕ್ಕೆ ಕೈಹಾಕಿದಲ್ಲಿ ಯಶಸ್ಸು ಸಿಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶವಿದೆ. ಇವತ್ತು ಕೆಲಸದ ಒತ್ತಡ ಜಾಸ್ತಿ ಇರಲಿದೆ. ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ಪ್ರೇಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಕೆಲವೊಂದು ಕಾರ್ಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಅನಾವಶ್ಯಕವಾಗಿ ಖರ್ಚು ಮಾಡಬೇಡಿ.

ಮೀನ ರಾಶಿ

ನಿಮ್ಮ ಬದುಕಿನಲ್ಲಿ ಹೊಸ ಭರವಸೆಯ ಕಿರಣ ಮೂಡಲಿದೆ. ಸ್ನೇಹಿತರ ಜೊತೆಗೆ ಸಮಯ ಕಳೆಯಿರಿ. ಜ್ಞಾನಿ ಹಾಗೂ ಅನುಭವಿ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಹೊಸಬರನ್ನು ಭೇಟಿ ಮಾಡಿ. ಹೊಸ ಹೊಸ ಅನುಭವ ನಿಮ್ಮದಾಗುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ಧನ ಹಾನಿ ಮತ್ತು ಅನಾರೋಗ್ಯ ಕಾಡುವ ಸಾಧ್ಯತೆಯೂ ಇದೆ.

For Latest News Updates, Join Our Whatsapp Community🚩
RELATED ARTICLES

Most Popular