HomeAstroಭಂಗು ದೋಷ ನಿವಾರಣೆಯಾಗಬೇಕಾ......? ಇಲ್ಲಿದೆ ಪರಿಹಾರ

ಭಂಗು ದೋಷ ನಿವಾರಣೆಯಾಗಬೇಕಾ……? ಇಲ್ಲಿದೆ ಪರಿಹಾರ

ಕೆಲವರಿಗೆ ಮುಖದ ಮೇಲೆ ಭಂಗು ಮೂಡುತ್ತದೆ. ಇದು ಒಂದು ರೀತಿಯ ಕಲೆಗಳು. ಯಾರ ಮುಖದಲ್ಲಿ ಭಂಗು ಮೂಡಿರುತ್ತದೆಯೋ ಅವರಿಗೆ ಕಷ್ಟದ ಮೇಲೆ ಕಷ್ಟ ಬಂದೊದಗುತ್ತದೆ ಎನ್ನುತ್ತಾರೆ. ಹಾಗಾಗಿ ಇದಕ್ಕೆ ಸರಿಯಾದ ಪರಿಹಾರ ಮಾಡಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಭಂಗು ರಾಹುವಿನ ದೋಷದಿಂದ ಬರುತ್ತದೆ. ಇದು ಹೆಚ್ಚಾಗಿ ಮುಖದ ಮೇಲೆ ಮೂಡುತ್ತದೆ. ಯಾರು ಹೆಚ್ಚು ಹೊಸ್ತಿಲಿನ ಮೇಲೆ ಕುಳಿತುಕೊಳ್ಳುತ್ತಾರೋ ಅವರಿಗೆ ಈ ಭಂಗು ದೋಷ ಬರುತ್ತದೆ. ಈ ಭಂಗು ದೋಷಕ್ಕೊಳಗಾದವರು ಪ್ರತಿದಿನ ಮನೆಯ ಹೊರಗಡೆ ಮಣ್ಣಿನ ಅಥವಾ ನಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು. ಮಣ್ಣಿನ ದೀಪ ಹಚ್ಚುವವರು 2 ದೀಪವನ್ನಿಡಬೇಕು.

ಹಾಗೇ ನಿಂಬೆ ಹಣ್ಣಿನ ದೀಪವಿಡುವವರು ಒಂದನ್ನು ಹಚ್ಚಬೇಕು. ಹಾಗೇ ಪ್ರತಿರಾತ್ರಿ ಮುಖಕ್ಕೆ ತುಪ್ಪವನ್ನು ಹಚ್ಚಿ ಮಲಗಬೇಕು. ಹಾಗೂ ಬಡ ಮಕ್ಕಳಿಗೆ ವಸ್ತ್ರದಾನ ಮಾಡಬೇಕು. ಅಲ್ಲದೇ ತುಳಸಿ ಹಾಗೂ ಲಕ್ಷ್ಮೀದೇವಿಯ ಪೂಜೆ ಮಾಡಿದರೆ ನಿಮಗಿರುವ ಈ ದೋಷ ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular