ಭಗವಂತ ವಿಷ್ಣು ಚಮತ್ಕಾರದ ಬಗ್ಗೆ ಹೇಳಲಾಗಿರುವ ನಾರದ ಪುರಾಣದಲ್ಲಿ ವಿಷ್ಣುವನ್ನು ಒಲಿಸಿಕೊಳ್ಳಲು ಏನೆಲ್ಲ ಮಾಡಬೇಕೆಂಬುದನ್ನು ಹೇಳಲಾಗಿದೆ. ಪ್ರತಿ ದಿನ ಒಂದು ಕೆಲಸವನ್ನು ನಿಯಮಿತವಾಗಿ ಮಾಡುತ್ತ ಬಂದಲ್ಲಿ ಲಕ್ಷ್ಮಿ ಸಹೋದರಿ ಅಲಕ್ಷ್ಮಿ ಎಂದೂ ಮನೆ ಪ್ರವೇಶ ಮಾಡುವುದಿಲ್ಲ.
ಪ್ರತಿದಿನ ಚರಣಾಮೃತ ಸೇವನೆ ಮಾಡುವುದ್ರಿಂದ ಶರೀರ ರೋಗದಿಂದ ಮುಕ್ತವಾಗುತ್ತದೆ. ಇದ್ರ ಜೊತೆಗೆ ಗಂಭೀರ ರೋಗ ನಿವಾರಣೆಯಾಗುತ್ತದೆ.
ಮನೆ ಪೂರ್ತಿ ಚರಣಾಮೃತವನ್ನು ಚಿಮುಕಿಸಿದ್ರೆ ಅಲಕ್ಷ್ಮಿ ಮನೆ ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿ ಸದಾ ಶಾಂತಿ ನೆಲೆಸಿರುತ್ತದೆ.
ಪ್ರತಿದಿನ ಭಗವಂತ ವಿಷ್ಣುವಿನ ಪೂಜೆ ಮಾಡಿ ಪ್ರಸಾದ ಸ್ವೀಕರಿಸುವ ಜೊತೆಗೆ ಚರಣಾಮೃತವನ್ನು ಕುಡಿಯುವುದ್ರಿಂದ ಜೀವನ ಸುಖಕರವಾಗಿರುತ್ತದೆ.
ಸಾವಿನ ಭಯ ಕಾಡುತ್ತಿರುವವರು, ರಾತ್ರಿ ದುಃಸ್ವಪ್ನ ಬೀಳುತ್ತಿದ್ದರೆ ಪ್ರತಿದಿನ ಚರಣಾಮೃತವನ್ನು ಕುಡಿಯಬೇಕು. ಇದ್ರಿಂದ ಆಯಸ್ಸು ವೃದ್ಧಿಯಾಗುತ್ತದೆ.
ಚರಣಾಮೃತ ಕುಡಿಯುವುದ್ರಿಂದ ನಕಾರಾತ್ಮಕ ವಿಚಾರ ಮನಸ್ಸಿನಲ್ಲಿ ಸುಳಿಯುವುದಿಲ್ಲ. ಜೊತೆಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.