alex Certify ಸೋರೆಕಾಯಿ ಅಂದ್ರೆ ಮೂಗು ಮುರಿಯುವವರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋರೆಕಾಯಿ ಅಂದ್ರೆ ಮೂಗು ಮುರಿಯುವವರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

ಸೋರೆಕಾಯಿ ಹೆಸರು ಕೇಳಿದ್ರೆ ಮೂಗು ಮುರಿಯುವವರೇ ಹೆಚ್ಚು. ಹೆಚ್ಚಿನ ಜನರಿಗೆ ಸೋರೆಕಾಯಿ ಇಷ್ಟವಿಲ್ಲ, ಸೋರೆಕಾಯಿ ಮೇಲೋಗರಗಳನ್ನೂ ಇವರು ಸೇವಿಸುವುದಿಲ್ಲ. ಆದ್ರೆ ಈ ತರಕಾರಿಯನ್ನು ತಿನ್ನುವುದರಿಂದ ಇರುವ ಪ್ರಯೋಜನಗಳನ್ನು ಕೇಳಿದ್ರೆ ಅಂಥವರು ಕೂಡ ಸೋರೆಕಾಯಿ ತಿನ್ನಲು ಪ್ರಾರಂಭ ಮಾಡಿದ್ರೂ ಆಶ್ಚರ್ಯವೇನಿಲ್ಲ. ಯಾಕಂದ್ರೆ ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿ ಇದು.

ತೂಕ ಇಳಿಕೆ: ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಸೋರೆಕಾಯಿಯನ್ನು ತಿನ್ನಬೇಕು. ಇದು ನಿಮ್ಮ ತೂಕವನ್ನು ಕಡಿಮೆ ಮಾಡುವುದಲ್ಲದೆ, ಅನೇಕ ಪ್ರಮುಖ ಕಾಯಿಲೆಗಳು ನಿಮ್ಮಿಂದ ದೂರ ಉಳಿಯುವಂತೆ ನೋಡಿಕೊಳ್ಳುತ್ತದೆ. ಸೋರೆಕಾಯಿ ಜ್ಯೂಸ್‌ ಮಾಡಿ ಕುಡಿಯಿರಿ ಅಥವಾ ಮೇಲೋಗರಕ್ಕೂ ಬಳಸಬಹುದು.

ಹೊಟ್ಟೆಯ ಆರೋಗ್ಯ: ಕೆಲವರಿಗೆ ಯಾವಾಗಲೂ ಹೊಟ್ಟೆನೋವಿನ ಸಮಸ್ಯೆ ಇರುತ್ತದೆ. ಅಂಥವರು ಸೋರೆಕಾಯಿ ಸೇವನೆ ಮಾಡಬೇಕು. ಸೋರೆಕಾಯಿ ತಿನ್ನುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸ್ಟ್ರಾಂಗ್‌ ಆಗುತ್ತದೆ. ನೀವು ಯಾವುದೇ ತರಕಾರಿಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೃದಯದ ಆರೋಗ್ಯ: ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹೃದಯವನ್ನು ಸದೃಢವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು ಹೃದಯದ ಫಿಟ್ನೆಸ್‌ಗಾಗಿ ಸೋರೆಕಾಯಿ ಸೇವನೆ ಮಾಡಬೇಕು. ಇದು ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ಹೊಳೆಯುವ ತ್ವಚೆ ಹೊಂದಬೇಕು ಅನ್ನೊ ಆಸೆ ನಿಮಗಿದ್ದರೆ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸಿಕೊಳ್ಳಿ. ಸೋರೆಕಾಯಿ ಜ್ಯೂಸ್‌ ಕುಡಿಯುವುದರಿಂದ ನಿಮ್ಮ ತ್ವಚೆಗೆ ಹೊಳಪು ಬರುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ : ಈಗ ಪ್ರತಿಯೊಬ್ಬರಿಗೂ ಒತ್ತಡದ ಸಮಸ್ಯೆ ಇದೆ. ಅದನ್ನು ಕಡಿಮೆ ಮಾಡಿಕೊಳ್ಳಲು ಬಹುತೇಕರು ಯೋಗ, ವ್ಯಾಯಾಮದ ಮೊರೆಹೋಗುತ್ತಾರೆ. ಸೋರೆಕಾಯಿ ತಿನ್ನುವುದರಿಂದಲೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...