ರಾತ್ರಿ ಬೀಳುವ ಸ್ವಪ್ನಗಳು ಕೆಲವೊಮ್ಮೆ ಹಿತಕರವಾಗಿರುತ್ತವೆ. ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುತ್ತವೆ. ಕನಸಿನಲ್ಲಿ ಕಾಣುವ ಅನೇಕ ವಸ್ತುಗಳು ಮುಂದಿನ ಭವಿಷ್ಯವನ್ನು ಹೇಳುತ್ತವೆ. ಅನೇಕರ ಕನಸಿನಲ್ಲಿ ನೀರು ಕಾಣಿಸುತ್ತದೆ. ಸ್ವಪ್ನದಲ್ಲಿ ಕಾಣುವ ನೀರು ಏನನ್ನು ಸೂಚಿಸುತ್ತದೆ ಗೊತ್ತಾ…?
ಕನಸಿನಲ್ಲಿ ಮಳೆಯ ಕೆಲ ಹನಿಗಳು ಮಾತ್ರ ಕಾಣಿಸಿದ್ರೆ ನಿಮ್ಮ ನಿರಾಸೆ ಕೆಲವೇ ದಿನಗಳಲ್ಲಿ ದೂರವಾಗಲಿದೆ ಎಂದರ್ಥ. ಈ ರೀತಿ ಕನಸು ಕಾಣುವ ವ್ಯಕ್ತಿಗಳು ಕ್ಷಮಿಸುವ ಗುಣ ಹೊಂದಿರುತ್ತಾರೆ.
ಇನ್ನು ಸದಾ ಕನಸಿನಲ್ಲಿ ಜೋರಾಗಿ ಬೀಳುವ ಮಳೆ, ನೀರನ್ನು ಕಂಡಲ್ಲಿ ದುರಾಸೆಯ ವ್ಯಕ್ತಿಗಳು ಎಂದರ್ಥ. ಇವರು ಭಾವನೆಗಳ ಬಗ್ಗೆ ಗಂಭೀರವಾಗಿರುವುದಿಲ್ಲ.
ಸ್ವಪ್ನದಲ್ಲಿ ನೀರಿನ ತಟದಲ್ಲಿ ದೊಡ್ಡ ಶಬ್ಧ ಕೇಳಿದ್ರೆ ಶೀಘ್ರವೇ ಕೆಟ್ಟ ಘಟನೆ ನಿಮ್ಮ ಜೀವನದಲ್ಲಿ ಘಟಿಸಲಿದೆ ಎಂದರ್ಥ.
ನೀರಿನ ಮೇಲೆ ನಡೆದಂತೆ ಕನಸು ಕಂಡಲ್ಲಿ ಆಂತರಿಕ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸುತ್ತದೆ. ನಿಮ್ಮ ಮಹತ್ವಾಕಾಂಕ್ಷೆಗಳನ್ನು ಮರೆಮಾಡಲು ನೀವು ಬಿಡ್ತಿಲ್ಲ ಎಂದರ್ಥ.